ಹುಬ್ಬಳ್ಳಿಯ ಗಿರಿಯಾಲ ರಸ್ತೆಯಲ್ಲಿ ನಡೆದ ಘಟನೆ.
ಮಹೇಶ್ ಎಂಬಾತನಿಗೆ ಹೊಟ್ಟೆ ಸೇರಿ ದೇಹದ ವಿವಿಧ ಭಾಗಗಳಿಗೆ ನಿರ್ದಯವಾಗಿ ಚಾಕು ಇರಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಮಹೇಶ್ ನನ್ನು ಸ್ಥಳೀಯರು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಿರಿಯಾಲ ರಸ್ತೆಯ ಬಾರೊಂದರಲ್ಲಿ ಮದ್ಯ ಸೇವಿಸಿದ್ದ ಮೂವರು ಸ್ನೇಹಿತರ ನಡುವೆ ಕ್ಷುಲಕ ಕಾರಣಕ್ಕಾಗಿ ಜಗಳ ಶುರುವಾಗಿದ್ದು, ಜಗಳ ನಡೆದು ಸ್ವಲ್ಪ ದೂರ ಬಂದ ನಂತರ ರಮೇಶ್ ಹಾಗೂ ಆತನ ಸ್ನೇಹಿತರು ಸೇರಿ ಮಹೇಶ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪ. ಚಾಕುವಿನಿಂದ ಇರಿದು ಎಸ್ಕೇಪ್ ಆದ ಇಬ್ಬರು ಸ್ನೇಹಿತರು —
ನೇಕಾರ ನಗರದ ರಮೇಶ್ ಹಾಗೂ ಆತನ ಸ್ನೇಹಿತನ ವಿರುದ್ಧ ಕೃತ್ಯದ ಶಂಕೆ ವ್ಯಕ್ತವಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಮಹೇಶ್ ಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಈ ಘಟನೆಯ ಹಿಂದೆ ಹಣಕಾಸಿನ ವ್ಯವಹಾರವೇ ಕಾರಣ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಈ ಸಂಪೂರ್ಣ ಘಟನೆ ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

