Breaking News

ಸಚಿವರ ವಿರುದ್ಧದ ದೂರಿನ ಪತ್ರದ ಬಗ್ಗೆ ಮಂಡ್ಯ ಜಿಲ್ಲೆಯ ಎಸ್​ಪಿ ಜೊತೆ ಮಾತನಾಡಿ ವರದಿ ತರಿಸಿ ಕೊಡುತ್ತೇನೆ ಡಾ.ಜಿ.ಪರಮೇಶ್ವರ್​

ಬೆಂಗಳೂರು: ಸಚಿವರ ವಿರುದ್ಧದ ದೂರಿನ ಪತ್ರದ ಬಗ್ಗೆ ಮಂಡ್ಯ ಜಿಲ್ಲೆಯ ಎಸ್​ಪಿ ಜೊತೆ ಮಾತನಾಡಿ ವರದಿ ತರಿಸಿ ಕೊಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವ ಚೆಲುವರಾಯಸ್ವಾಮಿ ವಿರುದ್ಧವಾಗಿ ಯಾರೋ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಬರೆದಿರುವ ಪತ್ರ ನಕಲಿ ಇದೆ. ಅಧಿಕಾರಿಗಳು ನಾವು ಯಾರು ಪತ್ರ ಬರೆದಿಲ್ಲ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ಮಂಡ್ಯ ಎಸ್​ಪಿ ಜೊತೆ ಮಾತನಾಡಿ ನಾನು ವರದಿ ತರಿಸಿ ಕೊಡುತ್ತೇನೆ. ಅಧಿಕಾರಿಗಳು ನಾವು ಯಾರು ಪತ್ರ ಬರೆದಿಲ್ಲ ಎಂದು ದೂರು ನೀಡಿದ್ದಾರಂತೆ. ವರದಿ ಬಂದ ನಂತರ ಸಿಎಂ ಜೊತೆಗೆ ಚರ್ಚೆ ಮಾಡಿ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡುತ್ತೇವೆ. ನಕಲಿ ಪತ್ರ ಹೆಚ್ಚಾಗಿರುವ ಈ ಹಿನ್ನೆಲೆಯಲ್ಲಿ ಐಟಿ, ಗೃಹ ಇಲಾಖೆ ಕಠಿಣ ಕಾನೂನು ತರುವ ಬಗ್ಗೆ ಚರ್ಚೆ ಆಗುತ್ತಿದೆ. ಸೈಬರ್ ಕ್ರೈಂನವರು ಈಗಾಗಲೇ ಯಾರು ಹೀಗೆ ಪತ್ರಗಳನ್ನು ಬರೆಯುವವರು ಎಂಬುದನ್ನು ಕಂಡುಹಿಡಿಯುವ ಕಾರ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.

Share News

About BigTv News

Check Also

ಸಂಚಾರ ನಿಯಮ ಉಲ್ಲಂಘಿಸಿದ್ರೆ ಕೇಸ್ ಫಿಕ್ಸ್! 100% ಪ್ರಕರಣ ದಾಖಲಿಸಲು ಪೊಲೀಸರಿಗೆ ಖಡಕ್ ಸೂಚನೆ..

ಆಗಸ್ಟ್‌ನಲ್ಲಿ 100% ಸಾಧನೆ ಇಲ್ಲ! ಸಂಚಾರ ಪೊಲೀಸರಿಗೆ ಮೇಲಧಿಕಾರಿಗಳ ಖಡಕ್ ವಾರ್ನಿಂಗ್.. ನಿಯಮ ಉಲ್ಲಂಘನೆ ಕಂಡ್ರೆ ಕೇಸ್ ದಾಖಲಿಸಿ! ಪೊಲೀಸರಿಗೆ …

Leave a Reply

Your email address will not be published. Required fields are marked *