Breaking News

ಹುಬ್ಬಳ್ಳಿ ಬ್ರೇಕಿಂಗ್….ಕ್ಷುಲಕ ಕಾರಣಕ್ಕಾಗಿ ಮೂವರ ನಡುವೆ ಜಗಳ. ಸ್ನೇಹಿತರಿಂದಲೇ ಚಾಕು ಇರಿತ!!

ಮೊನ್ನೆಯಷ್ಟೇ ಯುವಕನೊಬ್ಬನನ್ನ ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಾಸುವ ಮುನ್ನವೇ ನಗರದಲ್ಲಿ ಮತ್ತೆ ಎರೆಡು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರತ್ಯೇಕ ಚಾಕು ಇರಿತ ಘಟನೆ ನಡೆದಿದೆ.ನೇಕಾರ ನಗರದ ನಿವಾಸಿ ರಮೇಶ್ ಹಾಗೂ ಆತನ ಸ್ನೇಹಿತರಿಬ್ಬರು ಸೇರಿ ಮಹೇಶ್ ಎಂಬುವನನ್ನು ಮದ್ಯ ಸೇವನೆಗಾಗಿ ಬಾರ್ ಗೆ ಕರೆದಿದ್ದಾರೆ, ಕುಡಿದ ನಂತರ ರಮೇಶ್ ಹಾಗೂ ಆತನ ಸ್ನೇಹಿತರಿಬ್ಬರು ಸೇರಿ ಮಹೇಶನ ಜೊತೆ ಜಗಳಕ್ಕೆ ಇಳಿದಿದ್ದಾರೆ, ಈ ಜಗಳ ವಿಕೋಪಕ್ಕೆ ತಿರುಗಿ ಇಬ್ಬರು ಸೇರಿ ಮಹೇಶನ ದೇಹದ ನಾನಾ ಭಾಗಕ್ಕೆ ಚಾಕು ಇರಿದ್ದಾರೆ. ಇನ್ನು ಚಾಕು ಇರಿತಕ್ಕೆ ಒಳಗಾದ ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಆತನನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಹುಬ್ಬಳ್ಳಿಯ ಗಿರಿಯಾಲ ರಸ್ತೆಯಲ್ಲಿ ನಡೆದ ಘಟನೆಯಾಗಿದ್ದು,ಮಹೇಶ್ ಎಂಬಾತನಿಗೆ ಚಾಕು ಇರಿಯಲಾಗಿದೆ.ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಚಾಕು ಇರಿತ ಶಂಕೆ ಏನಿಸಿದ್ದು.ಕಸಬಾಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.ಇನ್ನೊಂದೆಡೆ

ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದೆ ರೀತಿ ಕ್ಷುಲಕ ಕಾರಣಕ್ಕಾಗಿ ವ್ಯಕ್ತಿಗೆ ಚಾಕು ಇರಿಯಲಾಗಿದೆ. ಅನಿಲ್ ಗೊಲ್ಲರ್ ಎಂಬ ಯುವಕ ಫೈರೋಜ್ ಜಾಪ್ರಿ ಎಂಬುವನಿಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಕುಡಿದ ಅಮಲಿನಲ್ಲಿ ಈ ಇಬ್ಬರ ನಡುವೆಯೂ ಕ್ಷುಲಕ ಕಾರಣಕ್ಕಾಗಿ ಜಗಳ ನಡೆದಿದ್ದು ಏಕಾಏಕಿ ಅನಿಲ್ ಗೊಲ್ಲರ್, ಫೈರೋಜ್ ಜಾಪ್ರಿ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದಾನೆ. ಈ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗಾಯಗೊಂಡಿರುವ ಇಬ್ಬರೂ ಯುವಕರ ಸ್ಥಿತಿ ಚಿಂತಾಜನಕವಾಗಿದ್ದು, ಇಬ್ಬರಿಗೂ ಚಿಕಿತ್ಸೆ ಮುಂದುವರೆದಿದೆ.ಇನ್ನು ಒಂದೇ ವಾರದಲ್ಲಿ ಜನನಿಬಿಡ ಪ್ರದೇಶದಲ್ಲಿ ಈ ರೀತಿ ಎರಡ್ಮೂರು ಚಾಕು ಇರಿತ ಪ್ರಕರಣಗಳು ಪೊಲೀಸರ ನಿದ್ದೆಗೆಡಿಸಿರುವುದಂತೂ ಸುಳ್ಳಲ್ಲ. ಇನ್ನಾದ್ರೂ ಅವಳಿ ನಗರದಲ್ಲಿ ಇಂತಹ ಅಪರಾಧ ಪ್ರಕರಣಗಳಿಗೆ ಕಡಿವಾಣ ಬೀಳುತ್ತಾ ಅನ್ನೋ ಪ್ರಶ್ನೆಗೆ ಪೊಲೀಸ್ ಇಲಾಖೆಯೇ ಉತ್ತರ ನೀಡಬೇಕಿದೆ.

Share News

About Shaikh BigTv

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *