Breaking News

ಮೈ ಜುಮ್ ಎನಿಸುವ ಕಾಡಿನ ಹುಲಿ ಹಾಗೂ ಸಫಾರಿ ಹುಲಿ ನಡುವಿನ ಫೈಟಿಂಗ್ ಬನ್ನೇರುಘಟ್ಟದಲ್ಲಿ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆ

ಆನೇಕಲ್: ಕಾಡಿನ ಹುಲಿ ಹಾಗು ಸಫಾರಿ ಹುಲಿಯ ನಡುವೆ ಕಾದಾಟ ನಡೆದಿದ್ದು ಈ ಫೈಟಿಂಗ್ ನ ದೃಶ್ಯ ಸಫಾರಿ ವಾಹನದಲ್ಲಿದ್ದ ಪ್ರಾಣಿ ಪ್ರಿಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಹೌದು ಬೆಂಗಳೂರು ಹೊರವಲಯ ಬನ್ನೇರುಘಟ್ಟ ಬಯೋಲಾಜಿಕಲ್ ಸಫಾರಿಯಲ್ಲಿ ಕಾಡಿನ ಹುಲಿ ಹಾಗೂ ಸಫಾರಿ ಹುಲಿಯ ನಡುವೆ ಕಾದಾಟ ನಡೆದಿದ್ದು ನಿನ್ನೇ ಸಂಜೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ‌.ಇದನ್ನು ಅಧಿಕೃತವಾಗಿ ಕರ್ನಾಟಕ ಫಾರೆಸ್ಟ್ ಡಿಪಾರ್ಟ್ಮೆಂಟ್ ನ ಪೇಜ್ ನಲ್ಲಿ ಪ್ರಕಟ ಮಾಡಲಾಗಿದ್ದು ಈ ಎರಡು ಹುಲಿಗಳ ಕಾದಾಟದ ದೃಶ್ಯ ಸಫಾರಿ ವಾಹನದಲ್ಲಿದ್ದ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ‌ ಸೆರೆಯಾಗಿದೆ,ಎರಡು ಹುಲಿಗಳ ನಡುವಿನ ಫೈಟ್ ಸಫಾರಿ ಪ್ರಿಯರಿಗೆ ಪುಕ್ಸಾಟ್ಟೆ ಮನರಂಜನೆ ನೀಡಿದ್ದು ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಸಂಚಾರ ಮಾಡಿಕೊಂಡಿದ್ದ ಕಾಡಿನ ಹುಲಿ ಆಗಾಗ ಸಫಾರಿಯಲ್ಲಿನ ಹುಲಿಗಳ ಜಾಗದ ಬಳಿ ಕಾಣಿಸಿಕೊಂಡು ಸಫಾರಿಯಲ್ಲಿನ ಹುಲಿಗಳ ಮೇಲೆ ಆಗಾಗ್ಗೆ ಕಾದಾಟ ನಡೆಸುತ್ತಲೆ ಇದೆ ಅದೆ ರೀತಿ ಕೆಲವು ತಿಂಗಳುಗಳ ಹಿಂದೆ ಸಫಾರಿಯಲ್ಲಿನ ವಿಷ್ಣು ಎಂಬಾ ಹುಲಿಯ ಮೇಲೆ ಕಾದಾಟ ನಡೆಸಿ ವಿಷ್ಣು ಎಂಬಾ ಹುಲಿಯ ಕಾಲಿಗೆ ಗಂಭೀರ ಗಾಯಗೊಳಿಸಿತ್ತು ಅದರಿಂದ ವಿಷ್ಣು ಹುಲಿಗೆ‌ ಹಲವು ತಿಂಗಳುಗಳ ಕಾಲ ಚಿಕಿತ್ಸೆ ಸಹ ನೀಡಲಾಗಿದ್ದು ಆಗ ನಡೆದಿದ್ದ ಹುಲಿಗಳ ಫೈಟ್ನ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪದೇ ಪದೇ ಕಾಡಿನ ಹುಲಿ ಸಫಾರಿ ಹುಲಿಯ ಮಧ್ಯೆ ಕಾದಾಟ ನಡೆಯುತ್ತಲೇ ಬರುತ್ತಿದೆ.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *