ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ್ದ ಬೆಂಗಳೂರಿನ 7 ಕೋಟಿ ದರೋಡೆ ಕೇಸ್ ತನಿಖೆ ಚುರುಕುಗೊಂಡಿದ್ದು, ಆರೋಪಿಗಳ ವಿಚಾರಣೆ ತೀವ್ರಗೊಂಡಿದೆ. ಇದೀಗ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂಎಸ್ ವಾಹನದಲ್ಲಿದ್ದ ಸಿಸಿಟಿವಿ ಡಿವಿಆರ್ ಇಲ್ಲಿವರೆಗೂ ಪತ್ತೆಯಾಗಿಲ್ಲ. ಅರಣ್ಯ ಪ್ರದೇಶದಲ್ಲಿ ಆರೋಪಿಗಳು ಡಿವಿಆರ್ ಅನ್ನು ಎಸೆದಿದ್ದು ಸಿಎಂಎಸ್ ವಾಹನದಲ್ಲಿದ್ದ ಡಿವಿಆರ್ ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ದರೋಡೆಯ ವೇಳೆ ಡಿವಿಆರ್ ಸಮೇತ ಹಣವನ್ನು ಹೊತ್ತೊಯ್ದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ಗುರುತು ಸಿಗುತ್ತೆ ಅಂತ ಡಿವಿಆರ್ ಕೂಡ ಕಳ್ಳತನ ಮಾಡಿದ್ದಾರೆ. ಚಿತ್ತೂರು ಮಾರ್ಗದ ಅರಣ್ಯದಲ್ಲಿ ದರೋಡೆ ಗ್ಯಾಂಗ್ ಡಿವಿಆರ್ ಅನ್ನು ಎಸೆದಿದೆ. ಪ್ರಮುಖ ಸಾಕ್ಷಿ ಆಗಿರುವುದರಿಂದ ಡಿ ವಿ ಆರ್ ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

