Breaking News

ಕೆನಡಾ: ದಂಪತಿ ಹತ್ಯೆ ಕೇಸಲ್ಲಿ ಭಾರತೀಯ ಮೂಲದ ಮೂವರು ದೋಷಿ

ಕೆನಡಾದ ಅಬಾಟ್ಸ್‌ಫೋರ್ಡ್‌ನಲ್ಲಿ 2022ರಲ್ಲಿ ನಡೆದಿದ್ದ ಆರ್ನಾಲ್ಡ್ ಮತ್ತು ಜೋವಾನ್ನೆ ಡಿ ಜೊಂಗ್ ದಂಪತಿಗಳ ಕೊಲೆ ಪ್ರಕರಣದಲ್ಲಿ ಭಾರತೀಯ ಮೂಲದ ಗುರ್ಕರನ್ ಸಿಂಗ್, ಅಭಿಜೀತ್ ಸಿಂಗ್ ಮತ್ತು ಖುಷ್ವೀರ್ ತೂರ್ ಎಂಬುರನ್ನು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ಹಣದ ಆಸೆಗಾಗಿ ಈ ಮೂವರು ಪೂರ್ವ ಯೋಜನೆಯಂತೆ ದಂಪತಿಯನ್ನು ಕಟ್ಟಿಹಾಕಿ ಬರ್ಬರವಾಗಿ ಕೊಂದಿದ್ದರು. ಈ ದಂಪತಿ ಮನೆಯಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದ ಆರೋಪಿಗಳು, ಅವರಲ್ಲಿ ಹಣವಿದ್ದಿದ್ದರ ಬಗ್ಗೆ ತಿಳಿದು ಈ ಸಂಚು ರೂಪಿಸಿದ್ದರು. ಡಿಎನ್‌ಎ ಮತ್ತು ಫೋನ್ ಡೇಟಾ ಆಧಾರದ ಮೇಲೆ ಅಪರಾಧ ಸಾಬೀತಾಗಿದ್ದು, ಮೇ 28ರಂದು ಶಿಕ್ಷೆ ಪ್ರಕಟವಾಗಲಿದೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *