ಛತ್ತೀಸ್‌ಗಢದ ಬಿಜಾಪುರದಲ್ಲಿ 41 ನಕ್ಸಲರು ಬುಧವಾರ ಶರಣಾಗಿದ್ದಾರೆ. ಅವರಲ್ಲಿ 32 ಮಂದಿಯ ತಲೆಗೆ ಒಟ್ಟಾರೆ 1.19 ಕೋಟಿ ರೂ. ಬಹುಮಾನವನ್ನು ಘೋಷಿಸಲಾಗಿತ್ತು. ಈ ಪೈಕಿ 12 ಮಹಿಳೆಯರಿದ್ದಾರೆ. ಶರಣಾದವರಲ್ಲಿ ಮಾವೋವಾದಿಗಳಾದ ಪಿಎಲ್‌ಜಿಎ ಪಡೆ ಸದಸ್ಯರು ಮತ್ತು ವಿವಿಧ ಕಮಾಂಡರ್‌ಗಳು ಇದ್ದು, ಸಂವಿಧಾನದಲ್ಲಿ ವಿಶ್ವಾಸ ಹೊಂದಿದ್ದಾಗಿ ತಿಳಿಸಿದ್ದಾರೆ.ಶರಣಾದ ಪ್ರತಿಯೊಬ್ಬರಿಗೂ ತಲಾ 50,000 ರೂ. ಆರ್ಥಿಕ ನೆರವು ನೀಡಲಾಗಿದೆ. ಎಸ್‌ಪಿ ಜಿತೇಂದ್ರ ಕುಮಾರ್ ಯಾದವ್ ಪ್ರತಿಕ್ರಿಯಿಸಿ, 2024ರ ಜನವರಿಯಿಂದ ಜಿಲ್ಲೆಯಲ್ಲಿ ಒಟ್ಟು 790 ಮಾವೋವಾದಿ ಕಾರ್ಯಕರ್ತರು ಮುಖ್ಯವಾಹಿನಿಗೆ ಮರಳಿದ್ದಾರೆ. ಉಳಿದ ನಕ್ಸಲರು ಹಿಂಸಾ ಮಾರ್ಗವನ್ನು ತ್ಯಜಿಸಿ ಸಮಾಜಕ್ಕೆ ಮರಳುವಂತೆ ಮನವಿ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

