ಗುಡೇಮಾರನಹಳ್ಳಿ ಕಡೆಯಿಂದ ಬಂದ ಟ್ರ್ಯಾಕ್ಟರ್, ಮಲ್ಲರ ಬಾಣವಾಡಿಯ ಕಡೆ ತಿರುವು ಪಡೆಯುತ್ತಿದ್ದ ವೇಳೆ ಹಾಸನ ಕಡೆಗೆ ಹೊರಟಿದ್ದ ಲಾರಿ ರಭಸವಾಗಿ ಡಿಕ್ಕಿ ಹೊಡೆದಿದೆ.ಟ್ರಾಕ್ಟರ್ ಪಲ್ಟಿಯಾಗಿ ಅದರಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೆಲಮಂಗಲ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಅವೈಜ್ಞಾನಿಕ ರಸ್ತೆ ತಿರುವು ಮಾಡಿರುವುದೇ ಅಪಘಾತಕ್ಕೆ ಕಾರಣ. ಇಲ್ಲಿ ಹಲವು ಅಪಘಾತ ನಡೆದರೂ ಹೆದ್ದಾರಿ ಪ್ರಾಧಿಕಾರದವರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

