Breaking News

ಕೊಳ್ಳೇಗಾಲ: ಸಾಲದ ಹಣ ಕೇಳಲು ಹೋದ ವ್ಯಕ್ತಿಗೆ ಚಾಕು ಇರಿತ

ಕೊಳ್ಳೇಗಾಲ: ತಾಲ್ಲೂಕಿನ ತೇರಂಬಳ್ಳಿ ಗ್ರಾಮದಲ್ಲಿ ಬುಧವಾರ ಸಾಲದ ಹಣ ಕೇಳಲು ಹೋದ ವ್ಯಕ್ತಿಗೆ ಚಾಕು ಇರಿಯಲಾಗಿದೆ.ಗ್ರಾಮದ ಸುನೀಲ್ ಗಾಯಗೊಂಡಿದ್ದು, ಅದೇ ಗ್ರಾಮದ ಆರೋಪಿ ರಾಜಪ್ಪ ಪರಾರಿಯಾಗಿದ್ದಾರೆ. ಸಾಲದ ಹಣ ಕೇಳಲು ಬಂದಿದ್ದ ಸುನೀಲ್‌ಗೆ ರಾಜಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ, ಚಾಕುವಿನಿಂದ ಎಡತೋಳಿಗೆ ಇರಿದು ತೀವ್ರಗಾಯ ಮಾಡಿದ್ದಾರೆ.ತಕ್ಷಣ ಗ್ರಾಮಸ್ಥರು ಸುನೀಲ್ ಅವರನ್ನು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಹೆಂಡತಿಯನ್ನೇ ಅಟ್ಟಾಡಿಸಿಕೊಂಡು ಆಸಿಡ್ ಎರಚಿ, ಮಚ್ಚಿನಿಂದ ಹಲ್ಲೆ ಮಾಡಿದ ಗಂಡ..!

ಬೆಂಗಳೂರು: ಜೆ.ಪಿ.ನಗರ 3ನೇ ಹಂತದ ನಾರಾಯಣ ಕ್ಲೀನಿಕ್ ಬಳಿ ಪತ್ನಿ ಮಧುಮಿತ ಮೇಲೆ ಪತಿ ವೆಂಕಟೇಶ್ ಆಸಿಡ್ ಎರಚಿ, ಮಚ್ಚಿನಿಂದ …

Leave a Reply

Your email address will not be published. Required fields are marked *