Breaking News

ಶಾಹೀನ್‌ ಜತೆ ನಂಟು: ಕಾನ್ಪುರ ವೈದ್ಯಕೀಯ ವಿದ್ಯಾರ್ಥಿ ಪೊಲೀಸ್‌ ವಶಕ್ಕೆ

ದೆಹಲಿ ಕಾರ್‌ ಸ್ಫೋಟದ ತನಿಖೆಯ ಭಾಗವಾಗಿ ಕಾನ್ಪುರದ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳ ವಶಕ್ಕೆ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜೊಂದರಲ್ಲಿ ಹೃದ್ರೋಗಕ್ಕೆ ಸಂಬಂಧಿಸಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಡಾ.ಮೊಹಮದ್‌ ಆರೀಫ್‌ನನ್ನು ಆತನ ಬಾಡಿಗೆ ಮನೆಯಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.ಆರೀಫ್‌ ಜಮ್ಮು ಕಾಶ್ಮೀರದ ಅನಂತನಾಗ್ ಮೂಲದವನು ಎಂದು ತಿಳಿದುಬಂದಿದೆ. ದೆಹಲಿ ಸ್ಫೋಟ ನಡೆದ ದಿನದಂದು, ಕೃತ್ಯದ ಪ್ರಮುಖ ಆರೋಪಿಯಾದ ಡಾ.ಶಾಹೀನ್ ಸಯೀದ್‌ ಮತ್ತಾಕೆಯ ಸಹಚರರೊಂದಿಗೆ ಆರೀಫ್‌ ದೂರವಾಣಿ ಸಂಪರ್ಕದಲ್ಲಿದ್ದ ಎಂದು ಮೂಲಗಳು ತಿಳಿಸಿವೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *