Breaking News

ಮಣಿಯಂಪಾರೆ ಯುವಕ ಮಸ್ಕತ್ ನಲ್ಲಿ ಸಾವು

ಮಸ್ಕತ್ ನಲ್ಲಿ ಶುಕ್ರವಾರ (ಡಿ.5) ಈಜಲೆಂದು ತೆರಳಿದ ಸಂದರ್ಭ ಸಂಭವಿಸಿದ ಘಟನೆಯಲ್ಲಿ ಕಾಸರಗೋಡು ಜಿಲ್ಲೆಯ ಶೇಣಿ ಮಣಿಯಂಪಾರೆ ಕಂಗಿನಮೂಲೆ ನಿವಾಸಿ ಆಶಿಖ್ (21) ಮೃತಪಟ್ಟಿದ್ದಾರೆ.ಮಸ್ಕತ್ ನ ಸುಂದರ ನಿಸರ್ಗ ತಾಣ ವಾಡಿಶಾಬ್ ನಲ್ಲಿ ಈ ಘಟನೆ ಸಂಭವಿಸಿದೆ.ಆಶಿಖ್ ಅವರು ರಜಾ ದಿನವಾದ್ದರಿಂದ ಸ್ನಾನ ಮತ್ತು ನೀರಾಟಕ್ಕೆ ಗೆಳೆಯರ ಜತೆಗೆ ಇಲ್ಲಿಗೆ ಬಂದಿದ್ದರು. ಮೇಲ್ಗಡೆಯಿಂದ ಹರಿವ ನೀರಿಗೆ ಹಾರುವಾಗ ತಲೆ ಬಂಡೆಗೆ ಬಡಿದು ಮೃತಪಟ್ಟರೆಂದು ಮಾಹಿತಿ ಲಭಿಸಿದೆ. ಮೃತದೇಹವನ್ನು ಊರಿಗೆ ತಲುಪಿಸಲು ಪ್ರಯತ್ನಗಳು ನಡೆಯುತ್ತಿವೆ. ಆರು ತಿಂಗಳ ಹಿಂದೆಯಷ್ಟೇ ಸೂಪರ್ ಮಾರ್ಕೆಟ್ ಸಿಬಂದಿಯಾಗಿ ಉದ್ಯೋಗಕ್ಕೆ ಇವರು ತೆರಳಿದ್ದರು. ಈ ಹುಡುಗನ ತಾಯಿ ಸುಬೈದಾ ನಾಲ್ಕು ವರ್ಷದ ಹಿಂದೆ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದರು. ಮೃತ ಯುವಕ ತಂದೆ, ಸೋದರ- ಸೋದರಿಯರನ್ನು ಅಗಲಿದ್ದಾರೆ.

Share News

About BigTv News

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *