ಕುಂದಗೋಳ: ಪೊಲೀಸ್ ಇಲಾಖೆಯಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಯೂ ಸಾರ್ವಜನಿಕರು ಹಾಗೂ ಸಮಾಜದ ರಕ್ಷಣೆಯ ಕೆಲಸದ ಒತ್ತಡದ ಮಧ್ಯೆ ಅದಮ್ಯ ಸಾಹಿತ್ಯ ಅಭಿರುಚಿ ಬೆಳೆಸಿಕೊಂಡು ಪುಸ್ತಕ ಬರೆದಿರುವ ಮಾರುತಿ ಆಲೂರ ಬರಹಗಾರಿಕೆಯ ಆಸಕ್ತಿ ಅನುಕರಣೀಯ ಎಂದು ಕುಂದಗೋಳ ಕಲ್ಯಾಣಪುರದ ಶ್ರೀ ಬಸವಣ್ಣಜ್ಜನವರು ಹೇಳಿದರು. ತಾಲೂಕಿನ ಸಂಶಿ ಗ್ರಾಮದ ಕೆಎಲ್‌ಇ ಕಲಾ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಹೆಡ್ ಕಾನ್ಸೆಬಲ್ ಮಾರುತಿ ಆಲೂರ ರಚಿಸಿದ ‘ಜೋಳದ ಜೋಳಿಗೆ’ಕವನ ಬಿಡುಗಡೆ ಮಾಡಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news





