Breaking News

ಇಂಡಿಗೋ ಸಮಸ್ಯೆ ಬೆನ್ನಲ್ಲೇ ಏರ್‌ಲೈನ್ಸ್‌ಗಳ ಲೂಟಿಗೆ ಬ್ರೇಕ್: ಟಿಕೆಟ್ ದರ ನಿಗದಿಪಡಿಸಿದ ಕೇಂದ್ರ ಸರ್ಕಾರ

ನವದೆಹಲಿ: ಇತ್ತೀಚೆಗೆ ಇಂಡಿಗೋ ವಿಮಾನ ಹಾರಾಟದಲ್ಲಿ ಪದೇ ಪದೇ ವ್ಯತ್ಯಯಗಳುಂಟಾದ ಬೆನ್ನಲ್ಲೇ, ಇತರ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಂದ ಮನಬಂದಂತೆ ಟಿಕೆಟ್ ದರ ವಸೂಲಿಗೆ ಇಳಿದಿದ್ದವು. ಈ ಅಕ್ರಮ ದರ ಹೆಚ್ಚಳದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಕಡಿವಾಣ ಹಾಕಲು ಮುಂದಾದ ಕೇಂದ್ರ ಸರ್ಕಾರ, ವಿಮಾನಯಾನ ಸಂಸ್ಥೆಗಳ ದುಪ್ಪಟ್ಟು ಟಿಕೆಟ್ ದರ ಲೂಟಿಗೆ ತಡೆ ನೀಡಿ, ಏಕರೂಪ ಟಿಕೆಟ್ ದರ ನಿಗದಿಪಡಿಸಿದೆ. ಇಂಡಿಗೋ ವಿಮಾನ ಸೇವೆಗಳಲ್ಲಿ ವ್ಯತ್ಯಯ ಉಂಟಾದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಏರ್‌ಲೈನ್ಸ್ ಸಂಸ್ಥೆಗಳು, ನಿಯಮಗಳನ್ನು ಉಲ್ಲಂಘಿಸಿ ಟಿಕೆಟ್ ದರವನ್ನು ಗಣನೀಯವಾಗಿ ಏರಿಕೆ ಮಾಡಿದ್ದವು. ಇದರಿಂದಾಗಿ ಅನಿವಾರ್ಯವಾಗಿ ಪ್ರಯಾಣಿಸಬೇಕಾದವರು ಭಾರಿ ಹಣ ತೆರಬೇಕಾಗಿತ್ತು. ಈ ಪರಿಸ್ಥಿತಿಯನ್ನು ಅರಿತ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ತಕ್ಷಣವೇ ಮಧ್ಯಪ್ರವೇಶಿಸಿ, ಎಲ್ಲ ವಿಮಾನಯಾನ ಸಂಸ್ಥೆಗಳಿಗೂ ಅನ್ವಯವಾಗುವಂತೆ ಏಕರೂಪ ದರಗಳನ್ನು ನಿಗದಿಪಡಿಸಿದೆ. ಹೊಸ ದರ ಪಟ್ಟಿ ಹೀಗಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ನಿಗದಿಪಡಿಸಿರುವ ಹೊಸ ದರ ಪಟ್ಟಿ ಇಂತಿದೆ:

* 500 ಕಿಲೋಮೀಟರ್‌ಗಳವರೆಗೆ: 7,500 ರೂಪಾಯಿ

* 500 80 1000 : 12,000 ರೂಪಾಯಿ

* 1000 80 1500 : 15,000

ರೂಪಾಯಿ

* 1500 ಕಿಲೋಮೀಟಗರ್‌ಳಿಗಿಂತ ಹೆಚ್ಚು ದೂರಕ್ಕೆ: 18,000

ರೂಪಾಯಿ

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *