ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರು ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸಜೀವ ದಹನವಾಗಿದ್ದಾರೆ. ಗುರುತು ಸಿಗದಷ್ಟು ಸುಟ್ಟು ಕರಕಲಾಗಿದ್ದ ಅವರ ದೇಹವನ್ನು ಕೈಯಲ್ಲಿದ್ದ ಉಂಗುರ ಮತ್ತು ಕಾರ್ ನಂಬರ್ ಪ್ಲೇಟ್‌ನಿಂದ ಪತ್ತೆಹಚ್ಚಲಾಗಿತ್ತು.ಹುಬ್ಬಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಅವರ ಮರಣೋತ್ತರ ಪರೀಕ್ಷೆ ನಡೆದು ಶವ ಹಸ್ತಾಂತರ ಮಾಡಲಾಯಿತು. ಎತ್ತರದ ಕಟ್ಟುಮಸ್ತಾದ ವ್ಯಕ್ತಿಯಾಗಿದ್ದ ಪಂಚಾಕ್ಷರಿ ಸಾಲಿಮಠ ಅವರ ದೇಹ ಎಷ್ಟು ಮಟ್ಟಿಗೆ ಸುಟ್ಟು ಹೋಗಿತ್ತೆಂದರೆ, ಚಿಕ್ಕ ಮಕ್ಕಳ ಮೃತದೇಹ ಎನ್ನುವಂತೆ ಅವರ ಶವ ಕಾಣುತ್ತಿತ್ತು.ಅವರ ಈ ಸಾವು ನಮ್ಮೆಲ್ಲರಿಗೂ ಬಹುದೊಡ್ಡ ಆಘಾತ ತಂದಿದೆ. ಅವರ ಕುಟುಂಬಸ್ಥರಿಗೆ ಬಹುದೊಡ್ಡ ಆಘಾತ ತಂದಿದೆ. ದೇವರು ಅವರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ನೀಡಲಿ ಎಂದು ಶಶಿಕುಮಾರ್ ಅವರು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

