Breaking News

ಅರೆ ಹುಚ್ಚನಾದ ಪತಿ, ಅತ್ತೆ ಮಾವ ಮನೆ ಖಾಲಿ ಮಾಡುವಂತೆ ತಾಕೀತು, ನ್ಯಾಯಕ್ಕಾಗಿ ಹೆಣ್ಣು ಮಗಳ ಅಲೆದಾಟ

ಹುಬ್ಬಳ್ಳಿ; ಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ. ಇಬ್ಬರು ಚಿಕ್ಕಮಕ್ಕಳು, ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇನ್ನು ತಾಯಿ ಮನೆಗೆ ಹೋಗಬೇಕಾದರೆ ಅಲ್ಲಿಯೂ ಅವಳ ಕಾಳಜಿ ಮಾಡುವವರಿಲ್ಲ. ಈಗಾಗಲೇ ಇದ್ದೊಂದು ಗಂಡನೆ ಮನೆಯನ್ನ ಖಾಲಿ ಮಾಡುವಂತೆ ಗಂಡನ ಮನೆಯವರ ಕಿರುಕುಳ ಈ ಹೆಣ್ಣು ಮಗಳು ಬೇಸತ್ತು ಹೋಗಿದ್ದಾಳೆ.

ಈ ಮಹಿಳೆಯ ಹೆಸರು ವಿದ್ಯಾರಾಣಿ ಹಬೀಬ ಹೆಸರಿಗೆ ತಕ್ಕಹಾಗೇ ವಿದ್ಯ ವಿನಯ ಎರಡು ಇದೆ ಆದರೆ ಬದುಕಿನಲ್ಲಿ ನೆಮ್ಮದಿ ಮಾತ್ರ ಇಲ್ಲ. ಇವಳ ಅತ್ತೆ ಮಾವ ಮನೆಯಿಂದ ನೀನು ಹೊರಗೆ ಹೋಗು ಅಂತಾ ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಇಲಾಖೆಯಿಂದ ನೋಟೀಸ್ ಜಾರಿ ಮಾಡಿದ್ದಾರೆ. ಆದ್ದರಿಂದ ಇವಳು ದಿಕ್ಕು ತೋಚದೇ ಹೀಗೆ ತನ್ನ ಮಕ್ಕಳನ್ನ ಜೊತೆ ಜೊತೆಯಾಗಿ ಕರೆದುಕೊಂಡು ತಿರುಗುತಿದ್ದಾಳೆ. ಈ ವಿದ್ಯಾರಾಣಿ ಹಬೀಬ ನಗರದ ಆರ್. ಎನ್ ಶೆಟ್ಟಿ ಪ್ರಾಕ್ಟರಿ ರಸ್ತೆಯಲ್ಲಿ ಮನೆ ಇದೆ‌. ತುಂಬು ಸಂಸಾರ ಅತ್ತೆ, ಮಾವ ಇಬ್ಬರು ಮೈದುನರು ಹೀಗೆ ಅವರ ಅವರ ಸಂಸಾರದೊಂದಿಗೆ ಚೆನ್ನಾಗಿ ಇದ್ದವರು. ಆದರೆ ವಿದ್ಯಾರಾಣಿ ಪತಿ ಸಹ ಖಾಸಗಿ ಉದ್ಯೋಗ ಮಾಡಿಕೊಂಡು ಚೆನ್ನಾಗಿಯೇ ಇದ್ದ ಅದೇನೋ ಇದ್ದ ಈತನ ಸಹೋದರರ ಕಾಟದಿಂದ ಈತ ಮಾನಸಿಕ ಖಿನ್ನತೆ ಒಳಗಾದ ಎಂದು ಪತ್ನಿ ವಿದ್ಯಾರಾಣಿ ಹಬೀಬ ಆರೋಪವಾಗಿದೆ. ಇನ್ನು ಚಿಕ್ಕಮಕ್ಕಳಿದ್ದು ಅವರ ಶಿಕ್ಷಣ ಹೇಗೆ ಎಂಬ ಚಿಂತೆ ಒಂದು ಕಡೆಯಾದರೆ ಇನ್ನೊಂದು ಕಡೆ ಮೊದಲೇ ಕೈಯಲ್ಲಿ ಹಣವಿಲ್ಲ ಗಂಡ ಅರೆಹುಚ್ಚಾ ಈಗ ನನಗೆ ಮನೆ ಖಾಲಿ ಮಾಡಿ ಎಂದರೆ ಹೇಗೆ ಮಾಡಲಿ ಎಂಬುದು ನೊಂದ ವಿದ್ಯಾರಾಣಿ ಹಬೀಬ ಅಳಲನ್ನ ತೊಡಗಿಕೊಂಡಳು.

ತನ್ನ ಗಂಡನ ಸಹೋದರರು ತಮ್ಮ ಜೊತೆಗೆ ಇದ್ದಾಗ ಒಳ್ಳೆಯ ಹಣ ಸಂಪಾದನೆ ಮಾಡಿಕೊಂಡಿದ್ದಾರೆ ಜೊತೆಗೆ ಅವರ ಜೊತೆಗೆ ತಮ್ಮ ಅವರ ತಾಯಿ ತಂದೆ ಅಂದರೆ ನನಗೆ ಅತ್ತೆ ಮಾವ ಅವರನ್ನು ಕರೆದುಕೊಂಡು ಹೋಗಿದ್ದು ಈಗ ಇದ್ದ ಬಿದ್ದ ಮನೆ ಸಹ ಸಹ ನಮಗೆ ಬೇಕು ಅಂತಾ ಕಾನೂನು ಹೋರಾಟ ಮಾಡುತಿದ್ದಾರೆ. ನನಗೆ ಹಣವಿಲ್ಲ ದುಡಿಯುವ ಗಂಡ ಸಹ ಈಗ ಅರೆಹುಚ್ಚನಾಗಿದ್ದಾನೆ. ಚಿಕ್ಕಮಕ್ಕಳು ಇಂತಹದರಲ್ಲಿ ಈ ಅಗತ್ಯವಾಗಿದೆ‌ ಮನೆ ಖಾಲಿ ಮಾಡುವಂತೆ ಶೀಘ್ರವೇ ಗಡುವು ನೀಡಿದ್ದಾರೆ. ಆದರೆ ಏನು ದಿಕ್ಕು ತೋಚದ ರೀತಿಯಲ್ಲಿ ವರ್ತನೆ ಮಾಡುತ್ತಿರುವ ಈ ಹೆಣ್ಣುಗಳು ಈಗ ಸಮಾಜದ ಹಿರಿಯರಲ್ಲಿ ಹಾಗೂ ಮಾಧ್ಯಮಗಳ ಮೊರೆ ಹೋಗಿದ್ದಾಳೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಸಮಾಜದ ಈ ನೊಂದ ಮಹಿಳೆ ಸಹಾಯಕ್ಕೆ ಬರುವುದು ಅಗತ್ಯವಾಗಿದೆ‌ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಕುಬೇರ್ ಪವಾರ. ನಿಜಕ್ಕೂ ಸರ್ವಸ್ಸವನ್ನ‌ ಕಳೆದುಕೊಂಡು ಬೀದಿಪಾಲಾಗುವ ಮುನ್ನ ಈ ಅಸಹಾಯಕ ಹೆಣ್ಣುಮಗಳ ನೆರವಿಗೆ ಎಲ್ಲರೂ ಧಾವಿಸಬೇಕಾಗಿದೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *