ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಆರಂಭದಲ್ಲಿ ಜಾಮೀನು ಪಡೆದು ಹಾಯಾಗಿ ಹೊರಗೆ ಸುತ್ತಾಡಿಕೊಂಡಿದ್ದ ಅವರು ಸುಪ್ರೀಂಕೋರ್ಟ್ ಬೇಲ್ ರದ್ದು ಮಾಡುತ್ತಿದ್ದಂತೆ ಮರಳಿ ಜೈಲು ಸೇರಿದ್ದಾರೆ. ಈಗ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಿಯಮಗಳು ಕಠಿಣವಾಗಿದ್ದು, ದರ್ಶನ್ ತತ್ತರಿಸಿ ಹೋಗಿದ್ದಾರಂತೆ.ದರ್ಶನ್ ಜೊತೆ ಒಂದೇ ಸೆಲ್ನಲ್ಲಿ ಅನುಕುಮಾರ್, ಜಗ್ಗ, ನಾಗರಾಜು, ಪ್ರದೋಶ್, ಲಕ್ಷ್ಮಣ್ ಇದ್ದಾರೆ. ಇವರೆಲ್ಲರೂ ರೇಣುಕಾಸ್ವಾಮಿ ಕೊಲೆ ಕೇಸ್ನ್ಲಿ ಜೈಲು ಸೇರಿದವರೇ. ನಾಗರಾಜು ಅವರನ್ನು ಹೊರತುಪಡಿಸಿ ಉಳಿದ ಆರೋಪಿಗಳಿಗೆ ದರ್ಶನ್ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

