ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ 2021 ರಲ್ಲಿ ನಡೆದ ಶರಣಬಸವ ಎಂಬವರ ಕೊಲೆ ಪ್ರಕರಣದಲ್ಲಿ 10 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಶುಕ್ರವಾರ ವಾದವಿವಾದ ಆಲಿಸಿದ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಯಚೂರು, ಪೀಠಾಸಿನ ಲಿಂಗಸುಗೂರು ನ್ಯಾಯಾಲಯದ ನ್ಯಾಯಾದೀಶರಾದ ಬಿ.ಬಿ.ಜಕಾತಿಯವರು ಆರೋಪಿಗಳಾದ ಜಗದೀಶ, ಯಮನೂರ, ಮಹಾಂಕಾಳಪ್ಪ, ಬಸವರಾಜ, ಹನುಮಂತಿ , ದುರುಗಪ್ಪ, ಶರಣಬಸವ, ಕೆಂಚವ್ಟ, ಯಲ್ಲವ್ವ, ನಿಂಗಪ್ಪಗೆ ಜೀವಾವಧಿ ಶಿಕ್ಷೆ ಹಾಗೂ 19, 500 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮಂಜುನಾಥ ಬೇರ್ಗಿ ವಾದ ಮಂಡಿಸಿದರು. ಸಿಪಿಐಗಳಾದ ಮಹಾಂತೇಶ ಸಜ್ಜನ್ ಹಾಗೂ ರಮೇಶ ಕುಲಕರ್ಣಿ ತನಿಖೆ ಕೈಗೊಂಡು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

