ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಮದ್ಯ ಸೇವನೆ ಮಾಡಿ, ಹೆಡ್‌ಲೈಟ್ ಹಾಕದೆ ಅತೀವೇಗದಲ್ಲಿ ವಾಹನ ಚಲಾಯಿಸಿದ ಟ್ಯಾಂಕರ್ ಚಾಲಕ ಮಹಾರಾಷ್ಟ್ರ ಮೂಲದ ಬಿಲ್ಸರ್ ಸಿಂಗ್ ಸೆಹರಾ ಎಂಬಾತನನ್ನು ಸಂಚಾರ ಠಾಣೆಯ ಪೊಲೀಸರು ವಶಕ್ಕೆ ತೆಗೆದುಕೊಂಡು ದಂಡ ವಿಧಿಸಿದ್ದಾರೆ.ಆತ ಸಾಸ್ತಾನದಿಂದ ರಾ.ಹೆ.ಯಲ್ಲಿ ನಿಯಂತ್ರಣವಿಲ್ಲದೆ ವಾಹನ ಚಲಾಯಿಸಿಕೊಂಡು ಬರುತ್ತಿದ್ದ.ಕೂದಲೆಳೆಯ ಅಂತರದಲ್ಲಿ ಹಲವಾರು ಅಪಘಾತಗಳು ತಪ್ಪಿ ಹೋಗಿದ್ದು, ಈ ಬಗ್ಗೆ ಮತ್ತೊಂದು ವಾಹನದಲ್ಲಿದ್ದವರು ವೀಡಿಯೋ ಚಿತ್ರೀಕರಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಪೊಲೀಸರು ಹಾಗೂ ಸ್ಥಳೀಯರ ಸಹಕಾರದಲ್ಲಿ ಅಂಬಲಪಾಡಿಯಲ್ಲಿ ವಾಹನವನ್ನು ತಡೆದು ಮದ್ಯ ವ್ಯಸನಿಯನ್ನು ವಶಕ್ಕೆ ಪಡೆದು ಪೋಲಿಸರಿಗೆ ಹಸ್ತಾಂತರಿಸಲಾಯಿತು. ಚಾಲಕನಿಗೆ ಸ್ಥಳೀಯರು ಹಲ್ಲೆ ನಡೆಸಲು ಮುಂದಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

