ಚಿತ್ರದುರ್ಗ:ಮೈತ್ರಿ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಸಿಎಂ ಗ್ರಾಮ ವಾಸ್ತವ್ಯ
ಮಾಡುತ್ತಾರೆ, ಎಲ್ಲರನ್ನೂ ಬೈಯುತ್ತಾರೆಂದು ಚಿತ್ರದುರ್ಗ ಜಿಲ್ಲೆಯ
ಮೊಳಕಾಲ್ಮೂರು ಪಟ್ಟಣದಲ್ಲಿ ಶಾಸಕ ಬಿ.ಶ್ರೀರಾಮುಲು ಹೇಳಿಕೆ ನೀಡಿದರು. ಪ್ರಮುಖವಾಗಿ
ಜಮೀರ್ ಅಹಮದ್ ಖಾನ್, ಡಿಕೆಶಿ ತಕ್ಷಣ ರಾಜೀನಾಮೆ
ನೀಡಬೇಕು. ಐಎಮ್ಎ ಪ್ರಕರಣದಲ್ಲಿ ಜಮೀರ್ ಗೆ ED ತನಿಖೆಗೆ ಹಾಜರಾಗುವಂತೆ
ನೋಟಿಸ್ ನೀಡಿದೆ. ಇನ್ನೂ ಮನ್ಸೂರ್ ಖಾನ್ ಬನ್ನಿ ರಕ್ಷಣೆ ನೀಡುತ್ತೇವೆ ಮನ್ಸೂರ್ ಎಲ್ಲೇ
ಇದ್ದರು ಹುಡುಕಿ ಕೊಡುತ್ತೇವೆ ಎಂದು ಸಚಿವ ಜಮೀರ್ ಹೇಳುತ್ತಾರೆ. ಆದ್ರೇ IMA ಪ್ರಕರಣದಲ್ಲಿ ಜಮೀರ್ ನೇರವಾಗಿ ಬಾಗಿಯಾಗಿದ್ದಾರೆ ಎಂದು ಶಾಸಕ
ಬಿ.ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಭ್ರಷ್ಟಾಚಾರ ರಹಿತ ಸರ್ಕಾರ ಆಗಿದ್ದರೆ, ತಕ್ಷಣ ಡಿಕೆಶಿ ,ಜಮೀರ್ ರಾಜೀನಾಮೆ ನೀಡಲಿ. ಹಾಗೂ ಸಿದ್ದರಾಮಯ್ಯ
ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಂಡಿದ್ದಾರೆ. ಕುಮಾರಸ್ವಾಮಿ ಲಾಟರಿ ಮೇಲೆ ಮುಖ್ಯಮಂತ್ರಿ ಆದವರು.
ಇಬ್ಬರೂ ಸೇರಿ ಎಂಪಿ ಚುನಾವಣೆಯಲ್ಲಿ ಎರಡು ಸ್ಥಾನ ಗೆಲ್ಲಲು ಆಗಿಲ್ಲ. ದೇಶದಲ್ಲಿ ಪ್ರಧಾನಿ ಮೋದಿ
ಅಲೆ ಇದೆ. ಮೈತ್ರಿ ಸರ್ಕಾರ ಇರುವವರೆಗೂ ವರ್ಗಾವಣೆಯಲ್ಲಿ ಹಣ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು
ಭದ್ರಾ ಹಿನ್ನೀರು ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಶ್ರೀ ರಾಮುಲು ಹೇಳಿಕೆ
ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





