Breaking News

ಜೈಲಿಗೆ ಗಾಂಜಾ ತಂದಿದ್ದ ಇಬ್ಬರ ಬಂಧನ

ಶಿವಮೊಗ್ಗ: ವಿಚಾರಣಾಧೀನ ಕೈದಿಗೆ ಜೀನ್ಸ್ ಪ್ಯಾಂಟ್‌ನ ಪಟ್ಟಿಯಲ್ಲಿ ಗಾಂಜಾ ಸಾಗಿಸಲು ಹೋಗಿ ಇಬ್ಬರು ಸಿಕ್ಕಿಬಿದ್ದಿರುವ ಘಟನೆ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಟಿಪ್ಪು ನಗರದ ನಿವಾಸಿಗಳಾದ ಖಿಜರ್ ಉಲಾ ಮತ್ತು ಇಬ್ರಾಹಿಂ ಜಬೀವುಲ್ಲಾ ಬಂಧಿತ ಆರೋಪಿಗಳು. ಜೈಲಿನಲ್ಲಿರುವ ವಿಚಾರಣಾಧೀನ ಕೈದಿ ಇಬ್ರಾಹಿಂ ಎಂಬಾತನನ್ನು ಕಾಣಲು ಟಿಪ್ಪು ನಗರದ ನಿವಾಸಿಗಳಾದ ಖಿಜರ್ ಉಲಾ ಮತ್ತು ಇಬ್ರಾಹಿಂ ಜಬವುಲಾ ಎಂಬುವವರು ಬಂದಿದ್ದರು. ಅವರು ಕೈದಿಗೆ ನೀಡಲು ತಂದಿದ್ದ ಬಟ್ಟೆಬರೆಗಳನ್ನು ಮುಖ್ಯದ್ವಾರದಲ್ಲಿ ತಪಾಸಣೆಗೊಳಪಡಿಸಿದಾಗ, ಒಂದು ಜೀನ್ಸ್ ಪ್ಯಾಂಟ್‌ನ ಸೊಂಟದ ಪಟ್ಟಿಯಲ್ಲಿ ಅನುಮಾನಾಸ್ಪದ ವಸ್ತು ಇರುವುದು ಪತ್ತೆಯಾಗಿದೆ. ತತ್ ಕ್ಷಣವೇ ಪ್ಯಾಂಟ್ ಪಟ್ಟಿ ಕತ್ತರಿಸಿ ಪರಿಶೀಲಿಸಿದಾಗ ಅದರೊಳಗೆ ಮಾದಕ ವಸ್ತುವಾದ ಗಾಂಜಾ ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆ ಇಬ್ಬರು ಸಂದರ್ಶಕರನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದೆ. ಕರ್ತವ್ಯದಲ್ಲಿದ್ದ ಎ.ಎಸ್.ಐ ಸತೀಶ್ ಕೆ.ಒ. ಮತ್ತು ಮಹಿಳಾ ಪೇದೆ ಸಂಗೀತಾ ತಪಾಸನೆ ನಡೆಸಿದ್ದು, ಕಾರಾಗೃಹದ ಪ್ರಭಾರ ಮುಖ್ಯ ಅಧೀಕ್ಷಕ ಪರಮೇಶ್ ಎಚ್.ವಿ. ಅವರು ಈ ಕುರಿತು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳಿಂದ ಒಂದು ಹೀರೋ ಹೊಂಡಾ ದ್ವಿಚಕ್ರ ವಾಹನ, ಎರಡು ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳು ಹಾಗೂ 200 ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *