Breaking News

ವಾಹನದಿಂದ ಜಿಗಿದು ಹಸು ಸಾವು; ಚಾಲಕನ ಮೇಲೆ ಪ್ರಕರಣ ದಾಖಲು

ಹೊಸನಗರ ತಾಲೂಕಿನ ಬ್ರಹ್ಮವರದಿಂದ ಚಿಂತಾಮಣಿಗೆ ಟಾಟಾ ಏಸ್‌ನಲ್ಲಿ ಸಾಗಿಸುತ್ತಿದ್ದ ಐದು ಹಸುಗಳ ಪೈಕಿ ಒಂದು ವಾಹನದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಸಾವನಪ್ಪಿದ್ದು, ಚಾಲಕನ ನಿರ್ಲಕ್ಷತನ ಹಾಗೂ ಅನುಮತಿ ಇಲ್ಲದೆ ಗೋವು ಸಾಕಾಣಿಕೆ ಸಾಗಾಣಿಕೆ ಮಾಡಿದ ಆರೋಪದಡಿ ಪಿಎಸ್‌ಐ ರಾಜು ರೆಡ್ಡಿ ಅವರು ಭಾನುವಾರ ಸ್ವಯಂ ದೂರು ದಾಖಲಿಸಿಕೊಂಡು ವಾಹನ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ‍ಪ್ರಕರಣ ದಾಖಲಿಸಿದ್ದಾರೆಬಂಧಿತ ಆರೋಪಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮದ ಅನಿಲ್(27) ಹಾಗೂ ಚಿಂತಾಮಣಿ ಸುರೇಶ್ (30) ಎಂದು ಗುರುತಿಸಲಾಗಿದೆ. ದಾರಿಹೋಕರು ನೀಡಿದ ಮಾಹಿತಿ ಮೇರೆಗೆ ಪಿಎಸ್‌ಐ ರಾಜು ರೆಡ್ಡಿ ಹಾಗೂ ಪೋಲಿಸ್ ಸಿಬ್ಬಂದಿ ಅರಸಾಳಿನಲ್ಲಿ ವಾಹನ ತಡೆದು ವಶಕ್ಕೆ ಪಡೆದುಕೊಂಡರು. ಉಳಿದ 4 ಗೋವುಗಳನ್ನು ಗೋಶಾಲೆಗೆ ನೀಡಲಾಗಿದೆ.

Share News

About BigTv News

Check Also

ನಕಲಿ ಔಷಧ ಜಾಲ ಪತ್ತೆ : ಬೆಂಗಳೂರಿನ 5 ಕಡೆ ‘ED’ ದಾಳಿ : ಆರೋಪಿ ವೀರೇಶ್ ಬ್ಯಾಂಕ್ ಖಾತೆ ಫ್ರೀಜ್!

ಬೆಂಗಳೂರು: ನಕಲಿ ಔಷಧಿ ತಯಾರಿಕೆ ಮತ್ತು ಮಾರಾಟ ಜಾಲದ ವಿರುದ್ಧ ಇಡಿ ಅಧಿಕಾರಿಗಳು ಬೆಂಗಳೂರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ …

Leave a Reply

Your email address will not be published. Required fields are marked *