ತಡ ರಾರ್ತಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ 35 ಕುರಿಗಳು ಸಾವನ್ನಪ್ಪಿದ ಘಟನೆಹಿರಿಯೂರು ನಗರದ ವಿವಿ ಕ್ರಾಸದ ಬಳಿ ನಡೆದಿದೆ.ಶಿರಾ ತಾಲ್ಲೂಕಿನ ಗೌಡಗೇರೆ ಗೊಲ್ಲರಹಟ್ಟಿ ಶಿವಣ್ಣ ,ಕೃಷ್ಣಪ್ಪ ಅವರಿಗೆ ಸೇರಿದ ಕುರಿಗಳಾಗಿವೆ. ಲಕ್ಷಾಂತರ ಮೌಲ್ಯದ ಕುರಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕುರಿಗಾರರಿಗೆ ದೊಡ್ಡ ಪ್ರಮಾಣದ ನಷ್ಟವಾಗಿದೆ. ಅಪಘಾತ ವೆಸಗಿದವರನ್ನು ಬಂಧಿಸಿ ಸೂಕ್ತ ಪರಿಹಾರಕ್ಕಾಗಿ ಕುರಿಗಾರರು ಕಣ್ಣಿರು ಹಾಕಿದ್ದಾರೆ. ಈ ಕುರಿತು ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





