ಪಡುಬಿದ್ರಿ: ತೆಂಕ ಗ್ರಾಮದ ನಾರಾಳ್ತಾಯ ಗುಂಡದ ಬಳಿ ಡಿ. 7ರಂದು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹಾದುಹೋಗಿರುವ ರಾ. ಹೆ. 66ರ ಏಕಮುಖ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಢಿಕ್ಕಿಯಾಗಿ ತೆಂಕ ಗ್ರಾಮದ ಮನೋಜ್ ಕುಮಾರ್(42) ಎಂಬವರು ತಲೆಗೆ ತೀವ್ರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಡ್ಯಾನ್ಸ್ ಕ್ಲಾಸ್ ಗೆ ಹೋಗಿದ್ದ ಮಕ್ಕಳನ್ನು ಕರೆತರಲು ಹೆದ್ದಾರಿಯ ಪೂರ್ವ ಬದಿಯಿಂದ ಪಶ್ಚಿಮ ಬದಿಗೆ ದಾಟುತ್ತಿದ್ದ ವೇಳೆ ಈ ಘಟನೆ ಸಂಭವಿಸಿರುವುದಾಗಿ ಪಡುಬಿದ್ರಿ ಪೊಲೀಸರಿಗಿತ್ತ ದೂರಲ್ಲಿ ತಿಳಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

