ಕುಂದಾಪುರ: ಕಳೆದು ಹೋದ ಚೆಕ್ ಹಾಳೆಯನ್ನು ಬಳಸಿ ಸಾಲ ಮರುಪಾವತಿ ಮಾಡಲು ಇದೆ ಎಂದು ವಕೀಲರ ಮೂಲಕ ನೋಟಿಸ್ ನೀಡಿರುವುದಾಗಿ ದೂರೊಂದು ದಾಖಲಾಗಿದೆ.ದೇವಲ್ಕುಂದ ಬಗ್ವಾಡಿ ಕ್ರಾಸ್ ಮಿಥುನ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಬೈಕಿನಲ್ಲಿ ಪ್ರಯಾಣಿಸುವಾಗ ಪರ್ಸ್ ಕಳೆದು ಹೋಗಿ ಅದರಲ್ಲಿ 2 ಚೆಕ್ ಹಾಳೆಗಳಿದ್ದವು.ಈ 2 ಚೆಕ್ ಹಾಳೆಗಳು ತಾರಾಪತಿ ರೋಹಿತ್ ಖಾರ್ವಿ ಅವರಿಗೆ ಸಿಕ್ಕಿದ್ದು, ವಕೀಲರ ಮೂಲಕ ರೋಹಿತ್ ಖಾರ್ವಿ ಅವರಿಂದ ಮಿಥುನ್ ಹಂತ ಹಂತವಾಗಿ ಬಡ್ಡಿ ಸಾಲದಲ್ಲಿ ಹಣ ಪಡೆದಿದ್ದು 5 ಲಕ್ಷ ರೂ. ನೀಡಬೇಕೆಂದು ನೋಟಿಸ್ ನೀಡಿದ್ದರು. ರೋಹಿತ್ ಖಾರ್ವಿಗೂ ಮಿಥುನ್‌ಗೂ ಹಣಕಾಸಿನ ವ್ಯವಹಾರ ಇಲ್ಲ. ಪರಿಶಿಷ್ಟ ಜಾತಿಗೆ ಸೇರಿದ ಕಾರಣ ಸುಳ್ಳು ಆಪಾದನೆ ಮಾಡಿ ನೋಟಿಸ್ ಕಳುಹಿಸಲಾಗಿದೆ ಎಂದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

