Breaking News

ಪತ್ರಿಕಾ ವಿತರಕರಿಗೆ ಸೌಲಭ್ಯ ನೀಡಲು ಸರ್ಕಾರ ಬದ್ಧ: ಸಚಿವ ಡಿ‌.ಸುಧಾಕರ್‌

ಚಿತ್ರದುರ್ಗ: ಚಳಿ, ಮಳೆ, ಬಿಸಿಲನ್ನು ಲೆಕ್ಕಿಸದೇ ಮನೆಮನೆಗೆ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರಿಗೆ ಸೌಲಭ್ಯ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಸೂರ್ಯ ಹುಟ್ಟುವುದಕ್ಕೂ ಮೊದಲೇ ಮನೆಮನೆಗೆ ಪತ್ರಿಕೆ ತಲುಪಿಸುವ ಅವರ ಸೇವೆ ಅನನ್ಯವಾದುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ತಿಳಿಸಿದರು.
ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಜಿಲ್ಲಾ ಕಾರ್ಯನಿತರ ಪತ್ರಿಕಾ ವಿತರಕರ ಸಂಘದ ವತಿಯಿಂದ ಇಲ್ಲಿನ ಮುರುಘಾಮಠದ ಅನುಭವ ಮಂಟಪದಲ್ಲಿ ಭಾನುವಾರ ನಡೆದ ಪತ್ರಿಕಾ ವಿತರಕರ 4ನೇ ರಾಜ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಪತ್ರಿಕೆ ವಿತರಣೆ ಮಾಡುತ್ತಾ ಓದಿ ದೊಡ್ಡವರಾದವರು ನಮ್ಮ ನಡುವೆ ಇದ್ದಾರೆ. ಎ‍ಪಿಜೆ ಅಬ್ದುಲ್‌ ಕಲಾಂ ಅವರು ಕೂಡ ಪತ್ರಿಕೆ ವಿತರಣೆ ಮಾಡುತ್ತಿದ್ದರು. ಕೋಲಾರದ ಮುನಿಯಪ್ಪ, ಹೊಳಲ್ಕೆರೆ ಶಾಸಕ ಚಂದ್ರಪ್ಪ ಅವರು ಕೂಡ ಪತ್ರಿಕೆ ವಿತರಣೆ ಕಾಯಕ ಮಾಡುತ್ತಿದ್ದರು ಎಂಬ ವಿಷಯ ಹೆಮ್ಮೆ ಎನಿಸುತ್ತದೆ. ಮನೆಮನೆಗೆ ಪತ್ರಿಕೆ ಹಾಕಿ ಓದಿ ವಿದ್ಯಾವಂತರಾದ, ಸಾಧನೆ ಮಾಡಿದವರ ಕತೆಗಳು ಸ್ಫೂರ್ತಿಯಾಗಬೇಕು ಎಂದರು.
ಇತರ ಉದ್ಯೋಗಿಗಳಿಗೆ ಇರುವಂತೆ ವಾರಕ್ಕೊಂದು ರಜೆ ವಿತರಕರಿಗೆ ಸಿಗುವುದಿಲ್ಲ. ಸೈಕಲ್ ತುಳಿದು ಪತ್ರಿಕೆ ಹಾಕಿ ಅದರಲ್ಲಿಯೇ ಸಿಗುವ ಅಲ್ಪ ಹಣದಲ್ಲಿಯೇ ಹಲವು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಖರ್ಚಿಗೆ ಬಳಸಿಕೊಳ್ಳುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ. ಕೋವಿಡ್ ಸಮಯದಲ್ಲಿ ವಿತರಕರು ಹಲವಾರು ತೊಂದರೆ ಅನುಭವಿಸಿದರು, ಹಲವರು ಮೃತಪಟ್ಟರು. ಹೀಗಾಗಿ ವಿತರಕರಿಗೆ ಸಹಾಯ ಮಾಡಲು ಸರ್ಕಾರ ಸಿದ್ಧವಿದೆ ಎಂದರು.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *