Breaking News

ಅರ್ಜುನ್ ಸರ್ಜಾ ಇ-ಮೇಲ್, ಫೇಸ್​​ಬುಕ್​​, ಟ್ವಿಟರ್ ಖಾತೆ ಹ್ಯಾಕ್

ಬೆಂಗಳೂರು: ತನ್ನ ಇ-ಮೇಲ್‌, ಫೇಸ್​​ಬುಕ್​​​​ ಹಾಗೂ ಟ್ವಿಟರ್ ಅಕೌಂಟ್​​ ಹ್ಯಾಕ್ ಆಗಿದೆ ಎಂದು ಬಹುಭಾಷಾ ನಟ ಅರ್ಜುನ್ ಸರ್ಜಾ ಪೊಲೀಸರಿಗೆ ದೂರು ನೀಡಿದ್ದಾರೆ. ಮೀ ಟೂ ಅಭಿಯಾನದ ಹಿನ್ನೆಲೆಯಲ್ಲಿ ನಟಿ ಶೃತಿ ಹರಿಹರನ್​ ಅರ್ಜುನ್​ ಸರ್ಜಾ ಅವರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ಹೊತ್ತಲ್ಲೇ ಸರ್ಜಾ ಅವರ ಇ-ಮೇಲ್​ ಹ್ಯಾಕ್ ಆಗಿರೋ ವಿಚಾರ ಬೆಳಕಿಗೆ ಬಂದಿದೆ. ಇ-ಮೇಲ್​ ಹ್ಯಾಕ್ ಮಾಡಿ ನಾನಾ ಮೇಲ್ ಕಳಿಸಲಾಗ್ತಿದೆ ಎಂದು ಅರ್ಜುನ್​ ಸರ್ಜಾ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ, ಮ್ಯಾನೇಜರ್‌ ಮೂಲಕ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.ಅರ್ಜುನ್ ಸರ್ಜಾ ಅವರ ಇ-ಮೇಲ್​​, ಫೇಸ್​​ಬುಕ್ ಮತ್ತು ಟ್ವಿಟರ್​ ಖಾತೆ ಹ್ಯಾಕ್ ಮಾಡಲಾಗಿದೆ ಎಂದು ಕಮೀಷನರ್ ಸುನೀಲ್ ಕುಮಾರ್​​ಗೆ ಅರ್ಜುನ್ ಸರ್ಜಾ ಮ್ಯಾನೇಜರ್ ಶಿವಾರ್ಜುನ್​​​ ದೂರು ನೀಡಿದ್ದಾರೆ. ಕಳೆದ ಆರು ತಿಂಗಳಿಂದ ಇಮೇಲ್, ಟ್ವಿಟರ್ ಖಾತೆ ಹ್ಯಾಕ್ ಮಾಡಿ ವೈಯಕ್ತಿಕ ಮಾಹಿತಿಗಳನ್ನ ಕದ್ದಿದ್ದಾರೆ ಎಂದು ಆರೋಪಿಸಿ ಹ್ಯಾಕ್ ಮಾಡಿರುವ ದಾಖಲೆ ಮತ್ತು ಕ್ಲಿಪ್ಪಿಂಗ್ ಸಮೇತ ದೂರು ನೀಡಿದ್ದಾರೆ. ಸೈಬರ್ ಕ್ರೈಮ್ ಪೊಲೀಸರಿಗೂ ಕೂಡ ಸರ್ಜಾ ಅವರ ಮ್ಯಾನೇಜರ್​ ದೂರು ನೀಡಿದ್ದಾರೆ.

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *