ಧಾರವಾಡ :ಜಿಲ್ಲಾ ನೆಹರು ಯುವ ಕೇಂದ್ರದ ಯುವ ಸಮನ್ವಯ ಅಧಿಕಾರಿಗಳಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದು ಜಿಲ್ಲಾ ಘಟಕದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಹುಬ್ಬಳ್ಳಿಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯಿಂದ ಸೋಮವಾರ ನಗರದ ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಅವರಿಗೆ ಮನವಿ ಸಲ್ಲಿಸಿದರು.ಜಿಲ್ಲೆಯ ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳು ಕಳೆದ 7 ತಿಂಗಳಿಂದ ಯುವ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಮತ್ತು ಜಿಲ್ಲೆಯ ಒಳ್ಳೆಯ ರಾಷ್ಟ್ರೀಯ ಯುವ ಕಾರ್ಯಕರ್ತರನ್ನು ಆಯ್ಕೆ ಮಾಡುವಲ್ಲಿ,ಆಯ್ಕೆ ಸಮಿತಿಯ ಅಧ್ಯಕ್ಷರನ್ನು ಕಡೆಗಣಿಸಿ ತಮಗೆ ಬೇಕಾದವರನ್ನು ಆಯ್ಕೆ ಮಾಡುತ್ತಿದ್ದಾರೆ.ಮತ್ತು ಯುವ ಜನರನ್ನು ಆಯ್ಕೆ ಮಾಡುತ್ತಿದ್ದಾರೆ, ಹಾಗೂ ಕಳೆದ 7 ತಿಂಗಳಿಂದ ಯುವ ಜನರಿಗೆ ಯಾವುದೇ ಅನುಕೂಲ ಆಗುತ್ತಿಲ್ಲ,ಹೀಗಾಗಿ ಈ ಅಧಿಕಾರಿಯನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿ ಇಂದು ನಡೆಯುತ್ತಿರುವ ಆಯ್ಕೆಯಲ್ಲಿ ನಿಮ್ಮ ಅಧ್ಯಕ್ಷತೆಯಿಲ್ಲದೆ ನೇಮಕಾತಿ ನಡೆಯುತ್ತಿದೆ,ಅದನ್ನು ಸ್ಥಗಿತಗೊಳಿಸಿ,ಹೊಸ ಅಧಿಕಾರಿ ನೇಮಕಾತಿ ಆಗುವವರೆಗೆ ನೇಮಕಾತಿ ಪ್ರಕ್ರಿಯೆ ನಡೆಸಬಾರದು ಎಂದು ಪತ್ರದ ಮೂಲಕ ಮನವಿ ಸಲ್ಲಿಸಿದರು.ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಜಿ.ಎನ್ ಮುದ್ದಿಗೌಡರ ,ತಾಲ್ಲೂಕು ಉಪಾಧ್ಯಕ್ಷ ವಿರೇಶ ಸವದತ್ತಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಸೋಲಾರಗೊಪ್ಪ,ಹಾಲಪ್ಪ ಕಂಡ್ಲೀಕೊಪ್ಪ,ಸಿವಾಜಿ ಕಡೆಪ್ಪನವರ,ರೇಖಾ ಹೊಸುರ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





