Breaking News

ಉಡುಪಿಯಲ್ಲಿ ಘೋರ ದುರಂತ : ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು.!

ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಮಗು ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ ನಡೆದಿದೆ.ಉಡುಪಿ ನಗರದ ಕಿನ್ನಿಮುಲ್ಕಿಯಲ್ಲಿ ಈ ಒಂದು ಘಟನೆ ನಡೆದಿದೆ.ಒಂದೂವರೆ ವರ್ಷದ ಮಗು ಕೀರ್ತನಾ ಮೃತಪಟ್ಟಿದೆ. ತಾಯಿ ನಯನಾ ಅವರು ತಮ್ಮ ಮಗುವನ್ನು ಎತ್ತಿಕೊಂಡು ಬಾವಿಯಲ್ಲಿ ನೀರು ಸೇದುವಾಗ ಅವಘಡ ನಡೆದಿದೆ.ಕೂಡಲೇ ತಾಯಿ ಹಗ್ಗದ ನೆರವಿನಲ್ಲಿ ಬಾವಿಗೆ ಇಳಿದು ಮಗುವನ್ನ ಮೇಲಕ್ಕೆತ್ತಿದ್ದಾರೆ. ಕೂಡಲೇ ಮಗುವನ್ನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ಅಷ್ಟರಲ್ಲೇ ಮಗು ಮೃತಪಟ್ಟಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *