ಕುಂದಾಪುರ: ನೆಲ್ಲಿಕಟ್ಟೆ ಬಲಾಡಿ ಮೇಲ್ ಬೈಲು ಬಸವ (52) ಅವರು ಆಯತಪ್ಪಿ ನದಿಗೆ ಬಿದ್ದು ಮೃತಪಟ್ಟಿದ್ದಾರೆ.ಪತ್ನಿಯ ಮನೆ ಸಸಿಹಿತ್ಲು ಬಳ್ಕೂರಿನಿಂದ ಮುಳ್ಳುಗುಡ್ಡೆ ಸೌಪರ್ಣಿಕಾ ಹೆಂಚಿನ ಕಾರ್ಖಾನೆಗೆ ಕೆಲಸಕ್ಕೆಂದು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಅವರು ಬಹಿರ್ದೆಸೆಗೆಂದು ಬಳ್ಕೂರು ಗ್ರಾಮದ ವಾರಾಹಿ ನದಿ ಸೇತುವೆ ಬಳಿ ಮರಳು ಧಕ್ಕೆ ಹತ್ತಿರ ಹೋದವರು ಆಯತಪ್ಪಿ ನದಿಗೆ ಬಿದ್ದರು.ಕೂಗಿಕೊಂಡಾಗ ಅದೇ ದಾರಿಯಲ್ಲಿ ಹೋಗುತ್ತಿದ್ದ ಅಪರಿಚಿತರು ಅವರನ್ನು ದಡಕ್ಕೆ ತಂದು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು. ಬಳಿಕ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡುತ್ತಿರುವಾಗ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

