Breaking News

ಛತ್ತೀಸಗಢ: 34 ನಕ್ಸಲರು ಶರಣು

ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ 34 ನಕ್ಸಲರು ಮಂಗಳವಾರ ಶರಣಾಗಿದ್ದಾರೆ. ಈ ಪೈಕಿ 26 ಮಂದಿಯ ಸುಳಿವು ನೀಡಿದವರಿಗೆ ಒಟ್ಟು ₹84 ಲಕ್ಷ ಬಹುಮಾನ ಘೋಷಿಸಲಾಗಿತ್ತು.ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ಆರಂಭಿಸಿದ ಪುನರ್ವಸತಿ ಯೋಜನೆಯಡಿ ಏಳು ಮಂದಿ ಮಹಿಳೆಯರು ಸೇರಿದಂತೆ 34 ನಕ್ಸಲರು ಶರಣಾಗಿದ್ದಾರೆ’ ಎಂದು ಬಿಜಾಪುರ ಪೊಲೀಸ್‌ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್‌ ತಿಳಿಸಿದರು.ಶರಣಾದವರಲ್ಲಿ ಪಂಡ್ರು ಪೂನೆಮ್‌ (45), ರುಕ್ನಿ ಹೇಮ್ಲಾ(25), ದೇವ ಉಯ್ಕಾ (22), ರಾಮ್‌ಲಾಲ್‌ ಪೋಯಮ್‌ (27), ಮೋಟು ಪೂನೆಮ್‌ (21) ಪ್ರಮುಖರು. ಇವರ ಸುಳಿವು ನೀಡಿದವರಿಗೆ ತಲಾ ₹8 ಲಕ್ಷ ಬಹುಮಾನ ಘೋಷಿಸಲಾಗಿತ್ತು.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *