Breaking News

ಅಂಗಡಿಯಿಂದ 1 ಲ.ರೂ. ಮೌಲ್ಯದ ಸೊತ್ತು ಕಳವು

ಬಂಟ್ವಾಳ: ಬಿ.ಸಿ.ರೋಡಿನಲ್ಲಿರುವ ಪರ್ಲಿಯಾ ನಿವಾಸಿ ಮೊಹಮ್ಮದ್‌ ಡಿ. ಅವರ ದೆಂಜಿಪಾಡಿ ಜನರಲ್‌ ಸ್ಟೋರ್‌ನ ಹಿಂಭಾಗದ ಕಿಟಕಿ ಒಡೆದು ನಗದು ಸೇರಿದಂತೆ 1 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಡಿ. 14 ರಾತ್ರಿ ನಡೆದಿದೆ. ಮರುದಿನ ಬೆಳಗ್ಗೆ ಅವರು ಅಂಗಡಿ ತೆರೆಯಲು ಬಂದಾಗ ಕೃತ್ಯ ಅರಿವಿಗೆ ಬಂದಿದೆ.ಸುಮಾರು 60 ಸಾವಿರ ರೂ. ಮೌಲ್ಯದ ಸಿಗರೇಟ್‌ ಪ್ಯಾಕೇಟ್‌, 18 ಸಾವಿರ ರೂ. ಮೌಲ್ಯದ ತುಪ್ಪ, 11 ಸಾವಿರ ರೂ. ಮೌಲ್ಯದ ಒಣಹಣ್ಣುಗಳು ಹಾಗೂ 8,500 ರೂ. ನಾಣ್ಯಗಳು ಕಳವಾಗಿವೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ: ಪರಿಶೀಲನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ಪರಿಶೀಲನೆ ನಡೆಸಿದರು. …

Leave a Reply

Your email address will not be published. Required fields are marked *