Breaking News

ಚಿನ್ನದ ಅಂಗಡಿ ಶಟರ್‌ ಒಡೆದು ಕೃತ್ಯ: ₹3 ಕೋಟಿ ಮೌಲ್ಯದ 140 ಕೆ.ಜಿ ಬೆಳ್ಳಿ ಕಳ್ಳತನ

ಚಿಕ್ಕಬಳ್ಳಾಪುರ: ನಗರದ ಬಿ.ಬಿ ರಸ್ತೆಯ ಎ.ಯು ಚಿನ್ನಾಭರಣ ಮಾರಾಟ ಮಳಿಗೆ ಶಟರ್ ಮುರಿದು ಕಳ್ಳರು 140 ಕೆ.ಜಿ ಬೆಳ್ಳಿ ದೋಚಿ ಪರಾರಿಯಾಗಿದ್ದರೆ. ಇದರ ಮೌಲ್ಯ ₹3 ಕೋಟಿ ಎಂದು ಅಂದಾಜಿಸಲಾಗಿದೆ.ಸೋಮವಾರ ರಾತ್ರಿ ಅಂಗಡಿಯ ಶಟರ್ ಮುರಿದು ಒಳನುಗ್ಗಿದ ಕಳ್ಳರು ಚಿನ್ನದ ಆಭರಣಗಳ ಲಾಕರ್ ಮುರಿಯಲು ಸಾಧ್ಯವಾಗದ ಕಾರಣ ಬೆಳ್ಳಿ ದೋಚಿದ್ದಾರೆ.ತಮ್ಮ ಮಾಹಿತಿ ದೊರೆಯಬಾರದು ಎಂದು ಸಿಸಿಟಿವಿ ಕ್ಯಾಮೆರಾ ಡಿವಿಆರ್‌ ಸಹ ಕೊಂಡೊಯ್ದಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ‘ಪರಿಣತ ಕಳ್ಳರ ತಂಡ ಈ ಕೃತ್ಯ ನಡೆಸಿದಂತೆ ಕಾಣುತ್ತಿದೆ. ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *