ಬೆಂಗಳೂರು: ಸ್ಯಾಂಡಲ್ವುಡ್ ನಟ ದಿಗಂತ್ ದೂದ್ಪೇಡ ಅಂತಲೇ ಹೆಸರುವಾಸಿಯಾಗಿರುವ ನಟ. ಮಲೆನಾಡಿನ ಸಾಗರದವರಾದ ದಿಗಂತ್ ಚಿತ್ರರಂಗದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಖ್ಯಾತಿಯನ್ನು ಗಳಿಸಿರುವ ನಟ. ಗೋವಾದಲ್ಲಿ ಕುಟುಂಬಸ್ಥರ ಜೊತೆಯಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಈ ನಟ ಸಮ್ಮರ್ ಶಾಟ್ ಮಾಡುವ ಸಂದರ್ಭದಲ್ಲಿ ಕುತ್ತಿಗೆಗೆ ಬಲವಾದ ಪೆಟ್ಟನ್ನು ಮಾಡಿಕೊಂಡಿದ್ದಾರೆ.
ಕತ್ತಿಗೆ ಬಲವಾದ ಏಟು ಮಾಡಿಕೊಂಡಿರುವ ನಟ ದಿಗಂತ್ ಮಣಿಪಾಲ್ ಆಸ್ಪತ್ರೆಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ದಾಖಲಾಗಲಿದ್ದಾರೆ. ನಟ ದಿಗಂತ್ ಈ ಸಂಕಷ್ಟವನ್ನೂ ಅತ್ಯಂತ ಸುಲಭವಾಗಿ ಎದುರಿಸಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news





