ಕಾಸರಗೋಡು: ನಾಲ್ಕೂವರೆ ವರ್ಷದ ಪುತ್ರಿ ಸಹಿತ ನಾಪತ್ತೆಯಾಗಿದ್ದ ಮಹಿಳೆ ಪ್ರಿಯತಮನೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ನ್ಯಾಯಾಲಯ ಈಕೆಯ ಇಚ್ಛೆಯಂತೆ ತೆರಳಲು ತಿಳಿಸಿದ ಹಿನ್ನೆಲೆಯಲ್ಲಿ ಪುತ್ರಿಯನ್ನು ಪತಿಗೆ ನೀಡಿ ಮಹಿಳೆ ಪ್ರಿಯತಮನೊಂದಿಗೆ ತೆರಳಿದ್ದಾಳೆ.ದೇಲಂಪಾಡಿ ಮಯ್ಯಳ ನಿವಾಸಿ ಎಸ್.ಎ. ಕಾವ್ಯ (25) ಪ್ರಿಯತಮನಾದ ಅಣ್ಣಪ್ಪಾಡಿಯ ನಿವಾಸಿ ಅಶ್ವತ್ಥ್ ಜೊತೆ ತೆರಳಿದ್ದಾಳೆ. ಡಿ.22 ರಂದು ಬೆಳಗ್ಗೆ ಕಾವ್ಯ ಪುತ್ರಿಯ ಜೊತೆ ಮನೆಯಿಂದ ತೆರಳಿದ್ದಳು. ಮರಳಿ ಬಾರದ ಹಿನ್ನೆಲೆಯಲ್ಲಿ ಪತಿ ಆದೂರು ಪೊಲೀಸರಿಗೆ ದೂರು ನೀಡಿದ್ದರು. ಕಾವ್ಯ ಪ್ರಿಯತಮ ಅಶ್ವತ್ಥ್‌ನೊಂದಿಗೆ ತೆರಳಿರಬೇಕೆಂದು ಶಂಕೆಯನ್ನು ದೂರಿನಲ್ಲಿ ವ್ಯಕ್ತಪಡಿಸಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ಕಾವ್ಯ ಪುತ್ರಿಯೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದಾಳೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

