ಮಣಿಪಾಲ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣಗಳು ಕಳವಾದ ಘಟನೆ ನಡೆದಿದೆ.ಮುಂಬಯಿ ಮೂಲದ ಹೆಲ್ಮೀನಾ ಸಾಲಿನ್ಸ್ ಅವರು ತಮ್ಮ ಮಗಳು, ಗಂಡ ಮತ್ತು ಮೊಮ್ಮಗಳೊಂದಿಗೆ ಡಿ.26ರಂದು ಮಧ್ಯಾಹ್ನ 3.10ಕ್ಕೆ ಮತ್ಸ್ಯಗಂಧ ರೈಲು ಸಂಖ್ಯೆ 12619 ಕೋಚ್ ನಲ್ಲಿ ತಮ್ಮ ಒಡವೆಗಳಿದ್ದ ಒಂದು ವ್ಯಾನಿಟಿ ಬ್ಯಾಗ್ ಬಟ್ಟೆಗಳಿದ್ದ ಹ್ಯಾಂಡ್ ಬ್ಯಾಗ್ ಮತ್ತು ಸೂಟ್ ಕೇಸ್‌ಗಳೊಂದಿಗೆ ಉಡುಪಿಗೆ ಪ್ರಯಾಣಿಸುತ್ತಿದ್ದರು.ಒಡವೆಗಳಿದ್ದ ವ್ಯಾನಿಟಿ ಬ್ಯಾಗ್ ಅನ್ನು ತನ್ನ ತಲೆಯ ಬಳಿ ಇರಿಸಿ ರಾತ್ರಿ ರೈಲಿನಲ್ಲಿ ಮಲಗಿದ್ದು, ಡಿ.27ರಂದು ಬೆಳಿಗ್ಗೆ 6.10 ಕ್ಕೆ ಮುರುಡೇಶ್ವರ ರೈಲು ನಿಲ್ದಾಣದಿಂದ ವಾಪಾಸಾಗುವಾಗ ಹೆಲ್ಮೀನಾ ಸಾಲಿನ್ಸ್ ಅವರ ಮಗಳು ಬೆಳಗ್ಗೆ ಹಲ್ಲು ಉಜ್ಜಲು ಬ್ರೆಷ್ ಹಾಗೂ ಪೇಸ್ಟ್ ತೆಗೆಯಲು ಬ್ಯಾಗನ್ನು ನೋಡಿದ್ದುಳೀ ವೇಳೆ ಬ್ಯಾಗ್ ಹೆಲ್ಮೀನಾ ಸಾಲಿನ್ಸ್ ಅವರ ತಲೆಯ ಬಳಿ ಇರದೇ ರೈಲ್ವೇ ಟೀ ಟೇಬಲ್ ಬಳಿ ಇದ್ದು ಬ್ಯಾಗ್ ಅನ್ನು ಪರೀಶಿಲಿಸಲಾಗಿ ಅದರಲ್ಲಿದ್ದ 45,80,000 ರೂ.ಮೌಲ್ಯದ 408 ಗ್ರಾಂ ಚಿನ್ನದ ಆಭರಣಗಳು ಹಾಗೂ 15,000 ರೂ.ಗಳನ್ನು ಯಾರೋ ಕಳ್ಳರು ಕಳವು ಮಾಡಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

