Breaking News

ಕ್ರಿಕೆಟ್ ಬುಕ್ಕಿಗಳನ್ನು ಮಟ್ಟ ಹಾಕಿಲು ಯಶಸ್ವಿ ಆದ ಹಳೇ ಹುಬ್ಬಳ್ಳಿ ಪೊಲೀಸರು…

ಕಪ್ ಕ್ರಿಕೆಟ್ ಬೆಟಿಂಗ್ ನಡೆಯುತ್ತಿದ್ದ ಅಡ್ಡೆಯ ಮೇಲೆ ಹಳೇ ಹುಬ್ಬಳ್ಳಿ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ ಆರು ಜನರನ್ನು ಬಂಧಿಸಿದ್ದಾರೆ. ಅವರಿಂದ 17500/- ರೂಪಾಯಿ ವಶಪಡಿಸಿಕೊಳ್ಳಲಾಗಿದೆ.ಶನಿವಾರ ನಡೆದ ಭಾರತ ಮತ್ತು ಪಾಕಿಸ್ತಾನ ವಿಶ್ವ ಕಪ್ ಪಂದ್ಯದ ವೇಳೆ ಆರು ಜನರು ಬೆಟ್ಟಿಂಗ್ ನಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಆಧರಿಸಿ ಪೊಲೀಸರು ಹೆಗ್ಗೆರಿಯ ಸಿದ್ಧಾರೂಢ ನಗರ, ಅರವಿಂದ ನಗರ ಹಾಗೂ ಆನಂದ ನಗರದ ಅಡ್ಡೆಗಳ ಮೇಲೆ ದಾಳಿ

ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆರು ಜನರನ್ನು ಬಂಧಿಸಿದ್ದು. ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಕ್ರಿಕೆಟ್ ಬೆಟ್ಟಿಂಗ್ ಆಡುವ ಯುವಕರು ಸಾಲದ ಸುಳಿವಲ್ಲಿ ಸಿಲುಕಿಕೊಂಡು, ಹಣ ಹಿಂತಿರುಗಿಸಲು ಆಗದೆ ಇದ್ದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ದೃಷ್ಟಿಯಿಂದ ನೋಡಿದಾಗ ಎಷ್ಟೋ ಜನರ ಪ್ರಾಣ ಕಾಪಾಡಿದ ಶ್ರೇಯಸ್ಸು,

ಹಳೇ ಹುಬ್ಬಳ್ಳಿಯ ಪೊಲೀಸ್ ಇನ್ಸ್ಪೆಕ್ಟರ್ ಆದ ಸುರೇಶ ಯಳ್ಳೂರ ಮತ್ತು ಅವರ ತಂಡಕ್ಕೆ ಸಲ್ಲುತ್ತದೆ. ಮಟ್ಕಾ ದಂದೆ ಕೊರರನ್ನು ಹೆಡೆ ಮುರಿ ಕಟ್ಟಲು ಯಶಸ್ವಿ ಆಗುತ್ತಾರೆ ಎನ್ನುವುದು ಜನರ ನಂಬಿಕೆ ಯಾಗಿದೆ.

Share News

About Shaikh BigTv

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *