Breaking News

ನಡುರಸ್ತೆಯಲ್ಲೇ ಬಿಎಂಟಿಸಿ ಬಸ್ ಟೈರ್ ಸ್ಫೋಟ; ಓರ್ವನಿಗೆ ಗಾಯ, ತಪ್ಪಿದ ಭಾರೀ ಅನಾಹುತ!

ಬೆಂಗಳೂರು: ನಗರದ ಸಿಂಗಸಂದ್ರದಲ್ಲಿ ಬಿಎಂಟಿಸಿ ಬಸ್‌ ಟೈರ್‌ ಸ್ಫೋಟಗೊಂಡು ಓರ್ವ ಪ್ರಯಾಣಿಕ ಗಾಯಗೊಂಡ ಘಟನೆ ಡಿ.28ರ ಭಾನುವಾರ ಬೆಳಗ್ಗೆ ನಡೆದಿದೆ.ಅತ್ತಿಬೆಲೆಯಿಂದ ಮೆಜೆಸ್ಟಿಕ್ ಕಡೆಗೆ ಹೊರಟಿದ್ದ ಬಸ್‌ ಸಿಂಗಸಂದ್ರ ಬಳಿ ಸಾಗುವಾಗ ಏಕಾಏಕಿ ಟೈರ್‌ ಸ್ಫೋಟಗೊಂಡಿದೆ.ಸ್ಫೋಟದ ಪರಿಣಾಮ ಟೈರ್‌ ಸಮೀಪದ ಸೀಟ್‌ಗೆ ಹಾನಿಯಾಗಿದ್ದು, ಬಸ್‌ನ ಕೆಳಭಾಗ ಛಿದ್ರವಾಗಿ ಧೂಳು ತುಂಬಿಕೊಂಡಿದೆ. ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದ್ದು, ಸ್ಫೋಟದ ಶಬ್ದದಿಂದ ಕೆಲಕಾಲ ಪ್ರಯಾಣಿಕರು ಆತಂಕಕ್ಕೊಳಗಾದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *