ಹುಬ್ಬಳ್ಳಿ: ಶಾಸಕ ಮುನಿರತ್ನ ಅವರನ್ನ ಪಕ್ಷದಿಂದ ಉಚ್ಛಾಟಿಸಿ ಎಂದು ಕಾಂಗ್ರೆಸ್ ಪಟ್ಟು ಹಿಡಿದ ವಿಚಾರಕ್ಕೆ
ಶಾಸಕ ಮಹೇಶ ಟೆಂಗಿನಕಾಯಿ ಆಕ್ಷೇಪ ವ್ಯಕ್ತಪಡಿಸಿದರು.
ಬಿಬಿಎಂಪಿ ಗುತ್ತಿಗೆದಾರನಿಗೆ ಮುನಿರತ್ನ ಬೆದರಿಕೆ ಆರೋಪ ಹಾಗೂ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು, ನೋಡ್ರಿ ಕಾಂಗ್ರೆಸ್ ನವರಿಗೆ ಕೆಲಸ- ಬಗಸಿ ಇಲ್ಲ. ಅವ್ರನ್ನ ಉಚ್ಚಾಟನೆ ಮಾಡಿ ಇವ್ರನ್ನ ಉಚ್ಚಾಟನೆ ಮಾಡಿ ಅಂತ ಹೇಳ್ತಾ ಇದ್ದಾರೆ. ಹಾಗಾದರೆ ರಾಹುಲ್ ಗಾಂಧಿ ದಲಿತರ ಮೀಸಲಾತಿ ತೆಗೆದು ಹಾಕುವ ಬಗ್ಗೆ ಮಾತನಾಡಿದ್ದಾರೆ. ಅವರನ್ನೂ ಉಚ್ಛಾಟನೆ ಮಾಡ್ತೀರಾ..? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದೊಳಗಿದೆ. ಹೋಂ ಮಿನಿಸ್ಟರ್ ನಿಮ್ಮವರೇ ಇದ್ದಾರೆ. ತನಿಖೆ ಮಾಡಿಸಿ. ಇವತ್ತು ಮೂಡಾ ಮತ್ತೆ ವಾಲ್ಮೀಕಿ ಹಗರಣದಲ್ಲಿ ಸಿಕ್ಕಾಕೊಂಡಿದ್ದಾರಲ್ಲ ಅವರ ಬಗ್ಗೆ ಮಾತಾಡ್ರಿ. ಉಚ್ಚಾಟನೆ ಮಾಡಿ ನೋಡೋಣ. ಫೋನ್ ಮಾಡಿ ಯಾರು ಯಾರಿಗಾದ್ರೂ ಧಮ್ಮಿ ಕೊಟ್ಟಿದ್ರೆ ಅದು ತಪ್ಪು. ಅದರ ಬಗ್ಗೆ ತನಿಖೆ ಮಾಡಿ ತನಿಖೆ ಮಾಡುವುದರಲ್ಲಿ ನಮ್ಮದೇನು ಅಭ್ಯಂತರ ಇಲ್ಲ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

