ಹೂವಿನಹಡಗಲಿ: ಪಟ್ಟಣ ಹಾಗೂ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆಪಟ್ಟಣ ಹೊರ ವಲಯ ನಂದಿಪುರ ದೊಡ್ಡಬಸವೇಶ್ವರ ಗದ್ದುಗೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ದಾಸರಹಳ್ಳಿ ತಾಂಡಾದ ಸುನೀಲ್ ನಾಯ್ಕ ಎಂಬಾತನ ಬಂಧಿಸಿ ₹10 ಸಾವಿರ ಮೌಲ್ಯದ 393.85 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.ಇಟ್ಟಿಗಿ ಗ್ರಾಮದ ಹೊರ ವಲಯ ಹಾಲಿನ ಡೇರಿ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ದಾಸರಹಳ್ಳಿ ತಾಂಡಾದ ನಿವಾಸಿ, ಮೂಲತಃ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕು ಶಿಡೇನೂರು ಗ್ರಾಮದ ಶಿವಶಂಕರ ಬಿದರಿ ಎಂಬಾತನ ಬಂಧಿಸಿ ₹5ಸಾವಿರ ಮೌಲ್ಯದ 100 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇಬ್ಬರನ್ನೂ ನ್ಯಾಯಾಲಯ ವಶಕ್ಕೆ ಒಪ್ಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

