ಕಾಲಡಿಯಿಂದ ಕಾಸರಗೋಡಿಗೆ ಬಂದಿದ್ದ ವೃದ್ಧ ದಂಪತಿಗಳು ನಾಪತ್ತೆಯಾಗಿರುವ ಘಟನೆ ನಡೆದಿದೆ.ಮನೆಯಿಂದ ತಂದೆ ಷಣ್ಮುಗಂ, ತಾಯಿ ರಮಣಿ ಅವರನ್ನು ಪುತ್ರ ಹೊರ ಹಾಕಿದ್ದು, ಇದರಿಂದ ಕುಂಬಳೆಯಲ್ಲಿರುವ ಪುತ್ರಿಯ ಮನೆಗೆಂದು ಕಾಲಡಿಯಿಂದ ರೈಲಿನಲ್ಲಿ ಬಂದು ಕಾಸರಗೋಡು ರೈಲು ನಿಲ್ದಾಣದಲ್ಲಿ ಇಳಿದಿದ್ದರು.ಅಲ್ಲಿಂದ ಇವರಿಗೆ ಆರ್‌ಪಿಎಫ್ ಹಾಗು ಸಮಾಜ ಸೇವಾ ಸಂಘಟನೆಗಳು ಕುಂಬಳೆಗೆ ಹೋಗಲೆಂದು ವ್ಯವಸ್ಥೆ ಮಾಡಿದ್ದರು. ಆದರೆ ಅವರು ಕಂಡು ಬರಲಿಲ್ಲ. ಬಳಿಕ ಹುಡುಕಿದಾಗ ಮಾವುಂಗಾಲಿನ ಆಶ್ರಮಕ್ಕೆ ತಲುಪಿದರು ಎಂಬ ಮಾಹಿತಿ ಲಭಿಸಿತ್ತು. ಅಲ್ಲಿ ತೆರಳಿ ನೋಡಿದರೆ ಅಲ್ಲಿಂದಲೂ ನಾಪತ್ತೆಯಾಗಿದ್ದಾರೆ. ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

