ಬೆಳಗಾವಿ: ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯುವಕನ ಮೇಲೆ ಆಕೆಯ ಪತಿ ಹಾಗೂ ಪತಿಯ ಸಹೋದರ ಸೇರಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ.ಮೂರು ಮಕ್ಕಳ ತಾಯಿಯ ಜೊತೆಗೆ ಕಳೆದ ನಾಲ್ಕು ವರ್ಷದಿಂದ ಈ ಯುವಕ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಅಕ್ಷಯ ಕಲ್ಲಟಗಿ ತೀವ್ರವಾಗಿ ಹಲ್ಲೆಗೊಳಗಾದ ಯುವಕ ಎಂದು ಗುರುತಿಸಲಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿವಾಹಿತ ಮಹಿಳೆ ಅಕ್ಷಯ್ಗೆ ಕರೆ ಮಾಡಿ ರಾತ್ರಿ ಭೇಟಿಯಾಗಲು ಕರೆದಿದ್ದಳು ಎನ್ನಲಾಗಿದೆ. ಹೇವಗಾಗಿ ಅಕ್ಷಯ್ ಆಕೆಯನ್ನು ಭೇಟಿಯಾಗಲು ತೆರಳಿದ್ದಾನೆ. ಈ ವೇಳೆ ಆತನನ್ನು ದಾರಿ ಮಧ್ಯೆ ತಡೆದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಈತನಿಗೆ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

