Breaking News

ಸಿದ್ದಗಂಗಾ ಮಠದ ಹೆಸರಲ್ಲಿ ವಂಚನೆ- ಬಂಜೆತನಕ್ಕೆ ನಕಲಿ ಮದ್ದು ಕೊಟ್ಟು ದೇಣಿಗೆ ಸಂಗ್ರಹ!

ತುಮಕೂರಿನ ಸಿದ್ದಗಂಗಾ ಮಠದ ಹೆಸರಿನಲ್ಲಿ ಕಿಡಿಗೇಡಿಗಳು ಸಾರ್ವಜನಿಕರಿಗೆ ವಂಚನೆ ಎಸಗಿದ ಘಟನೆ ನಡೆದಿದೆ. ಬಂಜೆತನಕ್ಕೆ ನಕಲಿ ಔಷಧಿ ಕೊಟ್ಟು ಜನರಿಂದ ಹಣ ವಸೂಲಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಸಿದ್ದಗಂಗಾ ಮಠದ ಹೆಸರು ದುರುಪಯೋಗಪಡಿಸಿಕೊಂಡು ಕಿಡಿಗೇಡಿಗಳು ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎನ್ನುವ ಆರೋಪ ನಗರದಲ್ಲಿ ಕೇಳಿ ಬಂದಿದೆ. ಮಠದ ಹೆಸರಿನಲ್ಲಿ ಬಂಜೆತನಕ್ಕೆ ನಕಲಿ ಔಷಧಿ ವಿತರಣೆ ಮಾಡಿ ಜನರಿಂದ ಹಣ ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿದ್ದಗಂಗಾ ಮಠ, ನಾವು ಈ ರೀತಿ ಬಂಜೆತನಕ್ಕೆ ಅಥವಾ ಯಾವುದೇ ವೈದ್ಯಕೀಯ ಚಿಕಿತ್ಸೆಗೆ ಔಷಧಿಗಳನ್ನು ವಿತರಿಸುತ್ತಿಲ್ಲ. ಜನರಿಂದ ದೇಣಿಗೆ ಸಂಗ್ರಹಕ್ಕೂ ಮಠದಿಂದ ಯಾರನ್ನು ಕೂಡಾ ನೇಮಿಸಿಲ್ಲ ಎಂದು ಹೇಳಿದೆ. ಮಠದ ಹೆಸರಿನಲ್ಲಿ ಈ ರೀತಿ ಹಣ ಕೇಳುವವರನ್ನು ನಂಬಬೇಡಿ, ವಂಚನೆಗೆ ಒಳಗಾಗಬೇಡಿ ಎಂದು ಮಠ ಎಚ್ಚರಿಸಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *