Breaking News

ಮುಸ್ಲಿಂ ಬಾಂದವರಿಂದ ಮಳೆಗಾಗಿ ನಮಾಜ್‌ .

ಬೆಳಗಾವಿ;ರಾಜ್ಯದಲ್ಲಿ ಮುಂಗಾರು ಮಳೆ ಕುಂಠಿತವಾದ ಕಾರಣ ಮುಸ್ಲಿಂ ಬಾಂದವರು ಬೆಳಗಾವಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ.ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ಬಾರದ ಕಾರಣದಿಂದ ಬರಗಾಲದ ಭೀತಿ ಎದುರಾಗಿದೆ.

ಅಲ್ಲದೆ ರೈತರು ಕಂಗಾಲಾಗಿದ್ದು, ಕೃಷಿ ಚಟುವಟಿಕೆ ನಡೆಸಲು ಹಿಂದೇಟು ಹಾಕುವಂತಾಗಿದೆ. ಇದೀಗ ವಾಡಿಕೆಯಂತೆ ಮಳೆ ಬರಲು ಈದ್ಗಾ ಮೈದಾನದಲ್ಲಿ ಮುಸಲ್ಮಾನರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದ್ದಾರೆ.

ಮುಫ್ತಿ ಅಬ್ದುಲ್ ಅಜೀಜ್ ಖಾಜಿ ನೇತೃತ್ವದಲ್ಲಿ ಮಳೆಗಾಗಿ
ಬೆಳಗಾವಿಯ ಅಂಜುಮಾನ್ ಸಂಸ್ಥೆ ಬಳಿಯ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಲಾಗಿದೆ.

ಪ್ರಾರ್ಥನೆ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ.

Share News

About BigTv News

Check Also

ಎಸಿಪಿ ಗಂಗಾಧರ ಮಾರ್ಗದರ್ಶನದಲ್ಲಿ ಪೊಲೀಸರ ಕಾರ್ಯಾಚರಣೆ – ಪಿಎಸ್‌ಐ ರವಿ ವಡ್ಡರ್, ಮಂಜುನಾಥ ಹುಲಕಂದ ತಂಡದ ಯಶಸ್ಸು…

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಆರೋಪಿಗೆ 3 ವರ್ಷ ಜೈಲು ಶಿಕ್ಷೆ. ಪೊಕ್ಸೋ ಪ್ರಕರಣದಲ್ಲಿ ದೋಷಿ ಸಾಬೀತು: ಯುವಕನಿಗೆ 3 ವರ್ಷ …

Leave a Reply

Your email address will not be published. Required fields are marked *