ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿದ್ದ ಉಗ್ರರ ಅಡಗುತಾಣವೊಂದನ್ನು ಭದ್ರತಾ ಪಡೆ ಅಧಿಕಾರಿಗಳು ನಾಶಗೊಳಿಸಿದ್ದಾರೆ.ಅಡಗುತಾಣದಲ್ಲಿದ್ದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.ಜಿಲ್ಲೆಯ ಶೀರಿ ಪ್ರದೇಶದಲ್ಲಿರುವ ಅರಣ್ಯದಲ್ಲಿ ಶನಿವಾರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಅಡಗುತಾಣ ಪತ್ತೆಯಾಯಿತು. ಎರಡು ಹ್ಯಾಂಡ್ ಗ್ರೆನೇಡ್‌ಗಳು, ಎಕೆ-47 ರೈಫಲ್‌ನ 24 ಗುಂಡುಗಳು, ವೈರ್‌ಲೆಸ್ ಆಯಂಟೆನಾ ಹಾಗೂ ಒಂದು ಕೊಡಲಿ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

