ಉಡುಪಿ: ಸ್ಟಾಕ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂದು ನಿವೃತ್ತ ಬ್ಯಾಂಕ್ ಉದ್ಯೋಗಿಗೆ ಲಕ್ಷಾಂತರ ರೂ.ವಂಚಿಸಿದ ಘಟನೆ ನಡೆದಿದೆ.ಎಂಐಟಿ ನಿವೃತ್ತ ಉದ್ಯೋಗಿ ಉಮಾನಂದ ಕೆ.ವಿ. ಹಣ ಕಳೆದುಕೊಂಡವರು. ವಾಟ್ಸಾಪ್ ನಲ್ಲಿ ವಂಚಕನೊಬ್ಬ ಇವರನ್ನು ಸಂಪರ್ಕಿಸಿ ಆಮಿಷವೊಡ್ಡಿದ್ದಾನೆ.ವಂಚಕರ ಮಾತು ನಂಬಿದ ಅವರು ನ. 6 ರಿಂದ ಡಿ. 31 ರ ವರೆಗೆ ಸ್ಟಾಕ್ ಮಾರ್ಕೇಟ್ ಕಂಪೆನಿಯಲ್ಲಿ ಆರೋಪಿಗಳು ಸೂಚಿಸಿದ ವಿವಿಧ ಖಾತೆಗಳಿಗೆ ಒಟ್ಟು 30,32,000 ರೂ. ಹೂಡಿಕೆ ಮಾಡಿದ್ದಾರೆ. ಆದರೆ ಆರೋಪಿಗಳು ಹಣ ಅಥವಾ ಲಾಭಾಂಶ ನೀಡದೆ ವಂಚಿಸಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

