Breaking News

ಕೆನಡಾದ ಅತಿದೊಡ್ಡ ದರೋಡೆ ಕೇಸ್: ಭಾರತೀಯ ಮೂಲದ ಆರೋಪಿ ಸೆರೆ

ಕೆನಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 180 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳತನ ಮಾಡಿದ ಆರೋಪದಡಿ ಭಾರತ ಮೂಲದ ವ್ಯಕ್ತಿಯನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅರ್ಸಲಾನ್ ಚೌಧರಿ ಎಂದು ಗುರುತಿಸಲಾಗಿದ್ದು, ದುಬೈನಿಂದ ಹೊರಟು ಕೆನಡಾ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣವೇ ‘ಪ್ರಾಜೆಕ್ಟ್ 24ಕೆ’ ಎಂಬ ಕಾರ್ಯಾಚರಣೆಯಡಿ ಈತನನ್ನು ಬಂಧಿಸಲಾಗಿದೆ.ಕೆನಡಾದ ಇತಿಹಾಸದಲ್ಲೇ ಅತಿದೊಡ್ಡ ಚಿನ್ನದ ದರೋಡೆ ಪ್ರಕರಣ ಇದಾಗಿದ್ದು, ಸ್ವಿಜರ್ಲೆಂಡ್‌ನಿಂದ ವಿಮಾನದ ಮೂಲಕ ಕೆನಡಾ ತಲುಪಿದ್ದ 400 ಕೇಜಿ ತೂಕದ ಶುದ್ಧ ಚಿನ್ನ, 22 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಕದಿಯಲಾಗಿತ್ತು. ಪ್ರಕರಣದ ಮುಖ್ಯ ಆರೋಪಿ ಸಿಮ್ರಾನ್ ಪ್ರೀತ್ ಪನೇಸರ್ ಭಾರತಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *