ಬೆಳಗಾವಿ: ಸಹೋದರರ ಗಲಾಟೆಯ ವೇಳೆ ತಂದೆಗೆ ಚಾಕುವಿನಿಂದ ಇರಿಯಲಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಘಟನೆ ನಡೆದಿದೆ.ಜಗಳ ವಿಕೋಪಕ್ಕೆ ತಿರುಗಿ ತಂದೆಗೆ ಪುತ್ರ ಚಾಕುವಿನಿಂದ ಇರಿದಿದ್ದಾನೆ. ಬಸಯ್ಯ ಏಣಗಿಮಠ(65) ಅವರಿಗೆ ಐದು ಕಡೆ ವಿಜಯ್ ಇರಿದಿದ್ದಾನೆ.ತಂದೆಯ ಜೊತೆಗೆ ಕಿರಿಯ ಮಗ ವಿಜಯ್ ಜಗಳವಾಡುತ್ತಿದ್ದ. ಈ ವೇಳೆ ಮಧ್ಯ ಪ್ರವೇಶಿಸಿದ ಸಹೋದರ ಹಾಗೂ ಪತ್ನಿ ಗಲಾಟೆ ಬಿಡಿಸಲು ಮುಂದಾಗಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ತಂದೆಗೆ ಚಾಕು ಇರಿದು ವಿಜಯ್ ಪರಾರಿಯಾಗಿದ್ದಾನೆ. ಗಾಯಾಳು ಬಸಯ್ಯನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೈಲಹೊಂಗಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

