Breaking News

ಆಯಸಿಡ್‌ ದಾಳಿಯಲ್ಲ: ಏರ್‌ಫ್ರೆಶ್ನರ್‌ ಸ್ಫೋಟದಿಂದ ಬಾಲಕಿ ಮುಖಕ್ಕೆ ಗಾಯ

ಗದಗ: ‘ಏರ್‌ ಫ್ರೆಶ್ನರ್‌ ಸ್ಫೋಟಿಸಿ ಬಾಲಕಿಯ ಮುಖ ಸುಡುವಂತೆ ಮಾಡಿದ ಆರೋಪದ ಮೇಲೆ ಅಲ್ತಾಫ್‌ ಎಂಬುವನನ್ನು ಬಂಧಿಸಿ, ಕ್ರಮ ಕೈಗೊಳ್ಳಲಾಗಿದೆ’ ಎಂದು ಗದಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌ ತಿಳಿಸಿದ್ದಾರೆ. ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಆಕೆಯ ಮುಖ ಮತ್ತು ಎದೆ ಭಾಗಕ್ಕೆ ಸುಟ್ಟ ಗಾಯಗಳಾಗಿವೆ. ಆದರೆ, ಅದು ಆಯಸಿಡ್ ದಾಳಿಯಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ‘ಘಟನಾ ಸ್ಥಳದಲ್ಲಿ ಆಯಸಿಡ್ ಅಂಶ ಕಂಡು ಬಂದಿಲ್ಲ. ಕಸ ಸುಟ್ಟಿರುವ ರಾಶಿ ಮಧ್ಯದಲ್ಲಿ ಏರ್‌ ಫ್ರೆಶ್ನರ್‌ ಕ್ಯಾನ್‌ ಇತ್ತು. ಬೆಂಕಿಯ ಶಾಖ ಮತ್ತು ಒತ್ತಡದಿಂದ ಕ್ಯಾನ್‌ ಸಿಡಿದಿದೆ. ತೊಂದರೆ ನೀಡಲೆಂದೇ ಆರೋಪಿಯು ಅಲ್ಲಿ ಏರ್‌ ಫ್ರೆಶ್ನರ್ ಇಟ್ಟಿದ್ದನೆಂದು ಬಾಲಕಿ ದೂರು ನೀಡಿದ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದರು. ‘ಎಲ್ಲರೂ ಅಕ್ಕಪಕ್ಕದ ಮನೆಯವರು. ಬಾಲಕಿಯನ್ನು ಚುಡಾಯಿಸಿದ್ದಕ್ಕೆ ಆಕೆಯ ತಾಯಿಯು ಆಸೀಫ್‌ಗೆ ಒಮ್ಮೆ ಎಚ್ಚರಿಕೆ ನೀಡಿದ್ದರಂತೆ. ತನಿಖೆ ಬಳಿಕ ಹೆಚ್ಚಿನ ವಿವರ ಗೊತ್ತಾಗಲಿದೆ’ ಎಂದು ತಿಳಿಸಿದರು.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *