Breaking News

ವಿಜಿಗೆ ಡಿಸಿಪಿ ಅಣ್ಣಾಮಲೈ ಖಡಕ್ ವಾರ್ನಿಂಗ್!

ಬೆಂಗಳೂರು: ನಟ ದುನಿಯಾ ವಿಜಿ ಕೌಟುಂಬಿಕ ಕಲಹ ಪ್ರಕರಣ ಸಂಬಂಧ, ವಿಜಿ ಮತ್ತು ಅವರ ಕುಟುಂಬಸ್ಥರನ್ನ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಇಂದು ವಿಚಾರಣೆ ನಡೆಸಿದ್ರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅಣ್ಣಾಮಲೈ, ಇಂದು ದುನಿಯಾ ವಿಜಯ್ ಕುಟುಂಬ ಮತ್ತು ನಾಗರತ್ನ ಇಬ್ಬರನ್ನೂ ವಿಚಾರಣೆಗೆ ಕರೆದಿದ್ದೆವು. ಇಂದು ಬೆಳಗ್ಗೆ 10:30ಕ್ಕೆ ಕರೆಯಲಾಗಿತ್ತು. ದುನಿಯಾ ವಿಜಯ್, ಕೀರ್ತಿಗೌಡ ಮತ್ತು ಕುಟುಂಬಸ್ಥರು ಬಂದಿದ್ದರು. ಆದ್ರೆ, ನಾಗರತ್ನ ಮತ್ತು ಕುಟುಂಬಸ್ಥರು ಗೈರಾಗಿದ್ದರು. ದುನಿಯಾ ವಿಜಯ್, ಕೀರ್ತಿಗೌಡ ಮತ್ತು ಕುಟುಂಬದವರಿಗೆ ವಾರ್ನಿಂಗ್ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಮತ್ತು ಸಾಮಾಜಿಕ ಸ್ವಾಸ್ತ್ಯ ಹಾಳು ಮಾಡದಂತೆ ವಾರ್ನ್ ಮಾಡಲಾಗಿದೆ. ಮುಂದೆ ಗಲಾಟೆ ಮಾಡದಂತೆ ಶ್ಯೂರಿಟಿ ಹಾಗೂ ಸಿಆರ್​ಪಿಸಿ ಸೆಕ್ಷನ್ 107 ಅಡಿ ₹ 5 ಲಕ್ಷದ ಬಾಂಡ್ ಪಡೆಯಲಾಗಿದೆ ಎಂದು ಹೇಳಿದರು

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *