Breaking News

ಹುಣಸೂರು | ಚೆಕ್‌ ಬೌನ್ಸ್‌ ಪ್ರಕರಣ: ಆರೋಪಿಗೆ 3 ತಿಂಗಳ ಜೈಲು ಶಿಕ್ಷೆ

ಜೆಎಂಎಫ್‌ಸಿ ಸಿವಿಲ್‌ ನ್ಯಾಯಾಲಯ ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಆರೋಪಿಗೆ ₹2.60 ಲಕ್ಷ ದಂಡ ವಿಧಿಸಿ ಶಿಕ್ಷೆ ನೀಡಿದ್ದು, ಹಣ ಪಾವತಿಸಲು ವಿಫಲವಾದಲ್ಲಿ 3 ತಿಂಗಳು ಜೈಲು ಸೆರೆ ವಾಸದ ತೀರ್ಪು ನೀಡಿ ಆದೇಶಿಸಿದೆ.ನಗರದ ಕಲ್ಕುಣಿಕೆ ಬಡಾವಣೆ ನಿವಾಸಿ ಕೆ.ಕೃಷ್ಣ ಅವರು ಎಚ್.ಡಿ.ಕೋಟೆ ತಾಲ್ಲೂಕಿನ ವಡ್ಡರಗುಡಿ ವಾಸಿ ಅಶ್ವತ್ಥ್‌ ಅವರಿಗೆ ಸಾಲದ ರೂಪದಲ್ಲಿ ನೀಡಿದ ಹಣಕ್ಕೆ ಖಾತ್ರಿಯಾಗಿ ಚೆಕ್‌ ಪಡೆದಿದ್ದರುಸಕಾಲಕ್ಕೆ ಸಾಲ ಮರುಪಾವತಿಸದೆ ಚೆಕ್‌ ಬೌನ್ಸ್‌ ಆದ ಕಾರಣ ಸಿವಿಲ್‌ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ಹಿರಿಯ ಸಿವಿಲ್‌ ನ್ಯಾಯಾಧೀಶೆ ಭಾಗ್ಯಮ್ಮ ಜ.13ರಂದು ತೀರ್ಪು ಪ್ರಕಟಿಸಿ ಆರೋಪಿಗೆ ₹ 2.60 ದಂಡ ಹಾಗೂ ತಪ್ಪಿದ್ದಲಿ 3 ತಿಂಗಳು ಸೆರೆವಾಸ ಎಂದು ಆದೇಶಿಸಿದ್ದಾರೆ. ಪಿರ್ಯಾದಿ ಕೆ.ಕೃಷ್ಣ ಅವರ ಪರವಾಗಿ ವಕೀಲ ಎಂ.ಆರ್.ಹರೀಶ್‌ ವಾದಿಸಿದ್ದರು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *